ADVERTISEMENT

ಹಲಗೆ ಸದ್ದು; ಬಣ್ಣದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 4:27 IST
Last Updated 20 ಮಾರ್ಚ್ 2022, 4:27 IST
ಹುಬ್ಬಳ್ಳಿ ಉಣಕಲ್‌ನ ಸಾಯಿನಗರದಲ್ಲಿ ಶನಿವಾರ ಹೋಳಿ ಅಂಗವಾಗಿ ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವತಿಯರು
ಹುಬ್ಬಳ್ಳಿ ಉಣಕಲ್‌ನ ಸಾಯಿನಗರದಲ್ಲಿ ಶನಿವಾರ ಹೋಳಿ ಅಂಗವಾಗಿ ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವತಿಯರು   

ಹುಬ್ಬಳ್ಳಿ: ನಗರದ ಕೆಲವು ಬಡಾವಣೆಗಳಲ್ಲಿ ಶನಿವಾರ ಸಾರ್ವಜನಿಕರು ಹೋಳಿ ಆಡಿ ಸಂಭ್ರಮಿಸಿದರು. ಚಿಣ್ಣರು ಹಲಗೆ ಬಾರಿಸುತ್ತ ಬಣ್ಣ ಎರಚಿ ಸಂಭ್ರಮಿಸಿದರೆ, ಯುವಕರು ಓಣೆ ತುಂಬಾ ಸಂಚರಿಸಿ ಪರಿಚಯದವರಿಗೆ ಬಣ್ಣ ಎರಚಿ ಖುಷಿಪಟ್ಟರು.

ವಿದ್ಯಾನಗರ, ಕೇಶ್ವಾಪುರ, ಗೋಕುಲ ರಸ್ತೆ, ಬೈರಿದೇವರಕೊಪ್ಪ, ನವನಗರ ಭಾಗಗಳಲ್ಲಿ ರಂಗಿನ ಹಬ್ಬ ಜೋರಾಗಿತ್ತು. ಹಳೇ ಹುಬ್ಬಳ್ಳಿ ಘೋಡಕೆ ಓಣಿ ಹಾಗೂ ನವಅಯೋಧ್ಯಾನಗರದಲ್ಲಿ ಹಿಂದೂ–ಮುಸ್ಲಿಂ ಯುವಕರು ಪರಸ್ಪರ ಬಣ್ಣ ಎರಚಿ ಸೌಹಾರ್ದ ಮೆರೆದರು.

‘ಬಹಳ ವರ್ಷಗಳಿಂದ ಹಿಂದೂ–ಮುಸ್ಲಿಮರು ಒಟ್ಟಾಗಿ ಬಣ್ಣದ ಹಬ್ಬ ಆಚರಿಸುತ್ತಿದ್ದಾರೆ. ನಾವು ಯಾವುದೇ ಹಬ್ಬವನ್ನಾದರೂ ಜತೆಯಾಗಿಯೇ ಆಚರಿಸುತ್ತಿದ್ದೇವೆ. ಹಿರಿಯರು ಹಾಕಿಕೊಟ್ಟ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದೇವೆ’ ಎಂದು ಡೋರ್‌ ಕಕ್ಕಯ್ಯ ಸಮಾಜದ ಅಧ್ಯಕ್ಷ ಜಗನ್ನಾತ ಸೋಣಾವಣೆ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.