ADVERTISEMENT

ಚನ್ನಮ್ಮನ ಮೂರ್ತಿಗೆ ಮುತ್ತಿದ ಜೇನು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 17:14 IST
Last Updated 10 ಸೆಪ್ಟೆಂಬರ್ 2020, 17:14 IST
ಹುಬ್ಬಳ್ಳಿ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿಗೆ ಮುತ್ತಿದ್ದ ಜೇನುನೊಣಗಳು
ಹುಬ್ಬಳ್ಳಿ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿಗೆ ಮುತ್ತಿದ್ದ ಜೇನುನೊಣಗಳು   

ಹುಬ್ಬಳ್ಳಿ: ನಗರದ ಹೃದಯ ಭಾಗವಾದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮನ ಮೂರ್ತಿಗೆ ಗುರುವಾರ ಜೇನುನೊಣಗಳು ಮುತ್ತಿಕ್ಕಿದ್ದವು. ವೃತ್ತದ ಸುತ್ತಲೂ ಜೇನು ಹುಳುಗಳು ಹಾರಾಡುತ್ತಿದ್ದರಿಂದ ಕೆಲ ಹೊತ್ತು ಜನರಲ್ಲಿ ಆತಂಕ ಮೂಡಿತ್ತು.

ಸರಿಯಾಗಿ ಚನ್ನಮ್ಮನ ಮೂರ್ತಿಯ ಮುಖಕ್ಕೆ ಪೂರ್ತಿಯಾಗಿ ಜೇನುನೊಣ ಮುತ್ತಿಕ್ಕಿದ್ದರಿಂದ ಮುಖ ಕಾಣುತ್ತಿರಲಿಲ್ಲ. ನಿತ್ಯ ಆ ವೃತ್ತದಲ್ಲಿ ಸಾಕಷ್ಟು ವಾಹನಗಳ ಸಂಚರಿಸುತ್ತಿದ್ದರೂ ಬಹಳಷ್ಟು ಜನ ಇದನ್ನು ಗಮನಿಸಿರಲಿಲ್ಲ. ಮಾಧ್ಯಮದವರು ಫೋಟೊ ಕ್ಲಿಕ್ಕಿಸುತ್ತಿದ್ದಾಗ ಅನೇಕರು ನಿಂತು ಜೇನನೊಣ ಮುತ್ತಿಕ್ಕಿದ ಚಿತ್ರಣ ನೋಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT