ADVERTISEMENT

‘ಟೈಲ್ಸ್‌ ಆ್ಯಂಡ್‌ ಸ್ಟೋನ್ಸ್‌’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:21 IST
Last Updated 15 ಜುಲೈ 2025, 7:21 IST
ಹುಬ್ಬಳ್ಳಿಯಲ್ಲಿ ಸೋಮವಾರ ‘ಟೈಲ್ಸ್‌ ಆ್ಯಂಡ್‌ ಸ್ಟೋನ್ಸ್‌’ ಪುಸ್ತಕ ಬಿಡುಗಡೆ ಮಾಡಲಾಯಿತು
ಹುಬ್ಬಳ್ಳಿಯಲ್ಲಿ ಸೋಮವಾರ ‘ಟೈಲ್ಸ್‌ ಆ್ಯಂಡ್‌ ಸ್ಟೋನ್ಸ್‌’ ಪುಸ್ತಕ ಬಿಡುಗಡೆ ಮಾಡಲಾಯಿತು   

ಹುಬ್ಬಳ್ಳಿ: ಇಲ್ಲಿನ ಉದ್ಯಮಿ ಅಭಿಷೇಕ ಮಲಾನಿ ಬರೆದಿರುವ ‘ಟೈಲ್ಸ್‌ ಆ್ಯಂಡ್‌ ಸ್ಟೋನ್ಸ್‌’ ಪುಸ್ತಕವನ್ನು ಸೋಮವಾರ ಬಿಡುಗಡೆ ಮಾಡಲಾಯಿತು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಕೆಎಲ್‌ಇ ತಾಂತ್ರಿಕ ಮಹಾವಿದ್ಯಾಲಯದ ಚಾನ್ಸಲರ್‌ ಅಶೋಕ ಶೆಟ್ಟರ್‌, ‘ಮನೆ ನಿರ್ಮಾಣದ ಕನಸು ಹೊತ್ತವರಿಗೆ ಎದುರಾಗುವ ಸಮಸ್ಯೆಗಳೇನು, ಅವುಗಳಿಗೆ ಪರಿಹಾರವೇನು ಎನ್ನುವುದನ್ನು ಈ ಪುಸ್ತಕ ತಿಳಿಸಿಕೊಡುತ್ತದೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಅಪರೂಪದ ಹೊತ್ತಿಗೆ ಇದಾಗಿದೆ’ ಎಂದರು.

ಕೃತಿಕಾರ ಅಭಿಷೇಕ ಮಲಾನಿ ಮಾತನಾಡಿ, ‘ಅಭಿವೃದ್ಧಿ, ಉದ್ಯಮ ಮತ್ತು ಶ್ರಮದ ಸಂಕಲನವಾಗಿರುವ ಎವಿಎಂ ಗ್ರಾನೈಟ್ ಸಂಸ್ಥೆಯಲ್ಲಿ ಕಲಿತ ಬದುಕಿನ ಪಾಠಗಳನ್ನು ಈ ಪುಸ್ತಕದಲ್ಲಿ ತಿಳಿಸಿದ್ದೇನೆ. ಮನೆ ನಿರ್ಮಿಸುವವರು ಎದುರಿಸುವ ತೊಂದರೆಗಳಿಗೆ ಪರಿಹಾರ ತೋರಿಸಬಹುದಾದ ಪುಸ್ತಕ ಇದಾಗಿದೆ ಎಂದು ಭಾವಿಸಿದ್ದೇನೆ’ ಎಂದು ಹೇಳಿದರು.

ADVERTISEMENT

‘ಮನೆ ನಿರ್ಮಾಣದ ಉದ್ಯಮದಲ್ಲಿರುವ ಡಿಸೈನರ್, ಬಿಲ್ಡರ್, ಎಂಜಿನಿಯರ್‌ಗಳಿಗೆ ಇದು ಉಪಯೋಗವಾಗಬಹುದು. ಕಾಮಗಾರಿ ಸಂದರ್ಭ ಎದುರಾಗುವ ನೈಜ್ಯ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಲ್ಲಿ ಪರಿಣಾಮಕಾರಿ ಅಂಶಗಳನ್ನು ಒಳಗೊಂಡಿದೆ’ ಎಂದರು.

ಎವಿಎಂ ಗ್ರಾನೈಟ್ಸ್‌ ಸಂಸ್ಥೆ ಭಾಸ್ಕರ್ ಮಲಾನಿ, ಮುಕುಂದ ಮಲಾನಿ ಹಾಗೂ ಇತರ ಗಣ್ಯರು ಪಾಲ್ಗೊಂಡಿದ್ದರು.

ಕೃತಿ ಪರಿಚಯ ಕೃತಿ: ‘ಟೈಲ್ಸ್‌ ಆ್ಯಂಡ್‌ ಸ್ಟೋನ್ಸ್‌’ ಲೇಖಕ: ಅಭಿಷೇಕ ಮಲಾನಿ ಪ್ರಕಾಶನ: ಪೆನ್‌ಡೌನ್‌ಪ್ರೆಸ್‌ ಬೆಲೆ: ₹399

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.