ADVERTISEMENT

ಹುಬ್ಬಳ್ಳಿ | ಕಾಮಗಾರಿ; ರೈಲು ಸಂಚಾರ ರದ್ದು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 4:24 IST
Last Updated 29 ಆಗಸ್ಟ್ 2025, 4:24 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ: ಬಳ್ಳಾರಿ ಮತ್ತು ತೋರಣಗಲ್ಲು ಯಾರ್ಡ್‌ಗಳಲ್ಲಿ ಥಿಕ್ ವೆಬ್ ಸ್ವಿಚ್‌ (ಟಿಡಬ್ಲ್ಯುಎಸ್‌) ಕಾಮಗಾರಿಗಾಗಿ ಲೈನ್ ಬ್ಲಾಕ್ ಕೈಗೊಳ್ಳುವುದರಿಂದ ಸೆಪ್ಟೆಂಬರ್ 3ರಂದು ಕೆಲವು ರೈಲು ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ.

ADVERTISEMENT

ಗುಂತಕಲ್ – ಚಿಕ್ಕಜಾಜೂರು ಪ್ಯಾಸೆಂಜರ್ (57415), ಚಿಕ್ಕಜಾಜೂರು – ಗುಂತಕಲ್ ಪ್ಯಾಸೆಂಜರ್ (57416 ) ಮತ್ತು ಹೊಸಪೇಟೆ – ಬಳ್ಳಾರಿ ಡೆಮು ವಿಶೇಷ (07397) ರೈಲುಗಳ ಸಂಚಾರವನ್ನು ಸೆ.3 ರಂದು ರದ್ದುಗೊಳಿಸಲಾಗಿದೆ.

ಸೆ.2ರಂದು ತಿರುಪತಿಯಿಂದ ಹೊರಡುವ ತಿರುಪತಿ – ಕದಿರಿದೇವರಪಲ್ಲಿ ಪ್ಯಾಸೆಂಜರ್ ರೈಲು (57405) ಸಂಚಾರ ಗುಂತಕಲ್ ಮತ್ತು ಕದಿರಿದೇವರಪಲ್ಲಿ ನಡುವೆ ಭಾಗಶಃ ರದ್ದುಗೊಂಡಿದೆ. ರೈಲು ಗುಂತಕಲ್‌ನಲ್ಲಿ ಪ್ರಯಾಣ ಕೊನೆಗೊಳಿಸಲಿದೆ.

ಸೆ.3ರಂದು ಕದಿರಿದೇವರಪಲ್ಲಿಯಿಂದ ಹೊರಡಬೇಕಿದ್ದ ಕದಿರಿದೇವರಪಲ್ಲಿ – ತಿರುಪತಿ ಪ್ಯಾಸೆಂಜರ್ ರೈಲು (57406) ಸಂಚಾರ ಕದಿರಿದೇವರಪಲ್ಲಿ ಮತ್ತು ಗುಂತಕಲ್ ನಡುವೆ ಭಾಗಶಃ ರದ್ದಾಗಿದ್ದು, ರೈಲು ನಿಗದಿತ ಸಮಯಕ್ಕೆ ಗುಂತಕಲ್‌ನಿಂದ ಪ್ರಯಾಣ ಪ್ರಾರಂಭಿಸಲಿದೆ.

ಸೆ.3ರಂದು ಬಳ್ಳಾರಿಯಿಂದ ಹೊರಡಬೇಕಿದ್ದ ಬಳ್ಳಾರಿ – ದಾವಣಗೆರೆ ಡೆಮು ವಿಶೇಷ ರೈಲು (07395) ಸಂಚಾರ ಬಳ್ಳಾರಿ ಮತ್ತು ಹೊಸಪೇಟೆ ನಡುವೆ ಭಾಗಶಃ ರದ್ದುಗೊಂಡಿದ್ದು, ನಿಗದಿತ ಸಮಯಕ್ಕೆ ಬಳ್ಳಾರಿ ಬದಲು ಹೊಸಪೇಟೆಯಿಂದ ಪ್ರಯಾಣ ಆರಂಭವಾಗಲಿದೆ.

ಸೆ.3ರಂದು ಎಸ್ಎಸ್ಎಸ್ ಹುಬ್ಬಳ್ಳಿ – ಗುಂತಕಲ್ ಪ್ಯಾಸೆಂಜರ್ ರೈಲು (56911) ಸಂಚಾರ ಮುನಿರಾಬಾದ್ ಮತ್ತು ಗುಂತಕಲ್ ನಡುವೆ ಭಾಗಶಃ ರದ್ದುಗೊಂಡಿದೆ. ಮುನಿರಾಬಾದ್‌ನಲ್ಲಿ ಪ್ರಯಾಣ ಕೊನೆಗೊಳ್ಳಲಿದೆ.

ಸೆ.3ರಂದು ಗುಂತಕಲ್‌ನಿಂದ ಹೊರಡುವ ಗುಂತಕಲ್ – ಎಸ್ಎಸ್ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ರೈಲು (56912) ಸಂಚಾರ ಗುಂತಕಲ್ ಮತ್ತು ಮುನಿರಾಬಾದ್ ನಡುವೆ ಭಾಗಶಃ ರದ್ದುಗೊಂಡಿದ್ದು, ಮುನಿರಾಬಾದ್‌ನಿಂದ ತನ್ನ ನಿಗದಿತ ಸಮಯಕ್ಕೆ ಪ್ರಯಾಣ ಆರಂಭವಾಗಲಿದೆ.

ನಿಯಂತ್ರಣ: ಸೆಪ್ಟೆಂಬರ್ 3ರಂದು ಹೊರಡುವ ಎಸ್ಎಸ್ಎಸ್ ಹುಬ್ಬಳ್ಳಿ – ತಿರುಪತಿ ಪ್ಯಾಸೆಂಜರ್ ರೈಲನ್ನು (57402) ಮಾರ್ಗಮಧ್ಯೆ 90 ನಿಮಿಷ ನಿಯಂತ್ರಣ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.