ADVERTISEMENT

ಧಾರವಾಡ | ಭಾರಿ ಮಳೆ: ವಿವಿಧೆಡೆ 20 ಮನೆ ಹಾನಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 7:29 IST
Last Updated 21 ಆಗಸ್ಟ್ 2025, 7:29 IST
ಧಾರವಾಡ ತಾಲ್ಲೂಕಿನ ಹೊಲದಲ್ಲಿ ಅಧಿಕಾರಿಗಳು ಬುಧವಾರ ಹೆಸರು ಬೆಳೆ ಪರಿಶೀಲನೆ ನಡೆಸಿದರು
ಧಾರವಾಡ ತಾಲ್ಲೂಕಿನ ಹೊಲದಲ್ಲಿ ಅಧಿಕಾರಿಗಳು ಬುಧವಾರ ಹೆಸರು ಬೆಳೆ ಪರಿಶೀಲನೆ ನಡೆಸಿದರು    

ಧಾರವಾಡ: ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ, ಬುಧವಾರ ಸುರಿದ ಮಳೆಗೆ ವಿವಿಧೆಡೆ 20 ಮನೆಗಳು ಭಾಗಶಃ ಹಾನಿಯಾಗಿದೆ. ತಾಲ್ಲೂಕು ಹುಬ್ಬಳ್ಳಿ 16, ಕುಂದಗೋಳ 3 ಹಾಗೂ ಧಾರವಾಡ 1 ಮನೆ ಹಾನಿಯಾಗಿದೆ.

ಜಿಲ್ಲೆಯ ವಿವಿಧೆಡೆ ಬುಧವಾರ ತುಂತುರು ಮಳೆಯಾಗಿದೆ. ಕೆಲ ದಿನಗಳ ಮಳೆಯಾಗುತ್ತಿದ್ದು ತಳ್ಳು ಗಾಡಿಗಳಲ್ಲಿ ವಸ್ತುಗಳ ಮಾರಾಟ, ಬೀದಿಬದಿ ವ್ಯಾಪಾರ ಪಡಿಪಟಲಾಗಿದೆ. ಅಳ್ನಾವರ 2.5, ಕಲಘಟಗಿ 2.2. ಧಾರವಾಡ 1.2, ಹುಬ್ಬಳ್ಳಿ ನಗರ 1 ಸೆಂ.ಮೀ ಮಳೆಯಾಗಿದೆ.

ಧಾರವಾಡ, ಕಲಘಟಗಿ, ಅಳ್ನಾವರ, ಕಲಘಟಗಿ, ನವಲಗುಂದ, ಕುಂದಗೋಳ ಹಾಗೂ, ಹುಬ್ಬಳ್ಳಿ ತಾಲ್ಲೂಕಿನ ಹಲವೆಡೆ ಅಧಿಕಾರಿಗಳು ಬೆಳೆ ಹಾನಿ ಪರಿಶೀಲನೆ ನಡೆಸಿದ್ದಾರೆ.

ADVERTISEMENT

ಕೊಯ್ಲಿಗೆ ಬಂದಿದ್ದ ಹೆಸರು, ಉದ್ದು ಬೆಳೆ ಮಳೆಯಿಂದಾಗಿ ಹಾನಿಯಾಗುತ್ತಿದೆ. ಬೆಳೆ ವಿಮೆ ಮಾಡಿದ ರೈತರು ಅಗತ್ಯ ದಾಖಲೆಗಳೊಂದಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.