ADVERTISEMENT

ಹುಬ್ಬಳ್ಳಿ | ಅವಳಿ ನಗರದಲ್ಲಿ 57 ಅನಧಿಕೃತ ಬಡಾವಣೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 7:57 IST
Last Updated 12 ಜೂನ್ 2020, 7:57 IST
ನಾಗೇಶ ಕಲಬುರ್ಗಿ
ನಾಗೇಶ ಕಲಬುರ್ಗಿ   

ಹುಬ್ಬಳ್ಳಿ: ಅವಳಿ ನಗರದಲ್ಲಿ 57 ಅನಧಿಕೃತ ಬಡಾವಣೆಗಳನ್ನು ಗುರುತಿಸಲಾಗಿದ್ದು, ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಅಧ್ಯಕ್ಷ ನಾಗೇಶ ಕಲಬುರ್ಗಿ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಪ್ರಕಾರ ಸರಿಪಡಿಸದಿದ್ದರೆ, ತೆರವು ಮಾಡಲಾಗುವುದು ಎಂದು ಹೇಳಿದರು. ಹುಬ್ಬಳ್ಳಿಯಲ್ಲಿ 30, ಧಾರವಾಡದಲ್ಲಿ 27 ಅನಧಿಕೃತ ಬಡಾವಣೆಗಳಿವೆ ಎಂದರು.

ಹುಡಾ ವ್ಯಾಪ್ತಿಯ 126 ನಿವೇಶನಗಳ ಹರಾಜಿಗೆ ಅರ್ಜಿ ಆಹ್ವಾನಿಸಲಾಗಿದೆ. ಗುಂಪು‌ ವಸತಿ ಯೋಜನೆಯಡಿ 160 ಮನೆ ನಿರ್ಮಾಣದ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.

ADVERTISEMENT

ಉಣಕಲ್, ತಡಸಿನಕೊಪ್ಪದಲ್ಲಿ 50:50 ಅನುಪಾತದಲ್ಲಿ ರೈತರೊಂದಿಗೆ ನಿವೇಶನಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. 100 ಎಕರೆ ನೀಡಲು ಮುಂದೆ ಬಂದಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.