ADVERTISEMENT

ಧಾರವಾಡ | ಮೊಳಕೆಯೊಡೆಯದ ಮೆಕ್ಕೆಜೋಳ: ಕಂಪನಿ ವಿರುದ್ಧ ರೈತರ ಆಕ್ರೋಶ, ದೂರು

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 4:54 IST
Last Updated 30 ಜೂನ್ 2025, 4:54 IST
<div class="paragraphs"><p>ಕಲಘಟಗಿ ತಾಲ್ಲೂಕಿನ ಬೇಗೂರ ಗ್ರಾಮದ ರೈತ ಶರಣಪ್ಪ ಮಲ್ಲೇಶಪ್ಪ ಚಳಮಟ್ಟಿ ಅವರ ಜಮೀನಿಗೆ ದುಮ್ಮವಾಡ ರೈತ ಸಂಪರ್ಕ ಕೇಂದ್ರದ ಅಧಿಕಾರಿ ವಿ.ವೈ.ಕಟ್ಟಿ ಭೇಟಿ ನೀಡಿ, ಪರಿಶೀಲಿಸಿದರು</p></div>

ಕಲಘಟಗಿ ತಾಲ್ಲೂಕಿನ ಬೇಗೂರ ಗ್ರಾಮದ ರೈತ ಶರಣಪ್ಪ ಮಲ್ಲೇಶಪ್ಪ ಚಳಮಟ್ಟಿ ಅವರ ಜಮೀನಿಗೆ ದುಮ್ಮವಾಡ ರೈತ ಸಂಪರ್ಕ ಕೇಂದ್ರದ ಅಧಿಕಾರಿ ವಿ.ವೈ.ಕಟ್ಟಿ ಭೇಟಿ ನೀಡಿ, ಪರಿಶೀಲಿಸಿದರು

   

ಕಲಘಟಗಿ: ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆ ಮಾಡಿದ ಕಂಪನಿಯೊಂದರ ಹೈಬ್ರಿಡ್ ಕ್ರಾನ್ ಸಿಡ್ಸ್ ಎಂಬ ಗೋವಿನ ಜೋಳವು ಸರಿಯಾಗಿ ಮೊಳಕೆಯೊಡೆದಿಲ್ಲ. ಕಳಪೆ ಮಟ್ಟದ ಬಿತ್ತನೆ ಬೀಜ ವಿತರಿಸಿ ರೈತರಿಗೆ ಮೋಸ ಮಾಡಿದ್ದಾರೆ ಎಂದು ರೈತರು ಕಂಪನಿ ವಿರುದ್ಧ ಆರೋಪಿಸಿ, ರೈತ ಸಂಪರ್ಕ ಕೇಂದ್ರಕ್ಕೆ ದೂರು ಸಲ್ಲಿಸಿದ್ದಾರೆ.

ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನ ಮುಂಗಾರಿನಲ್ಲಿ 18,034 ಹೇಕ್ಟರ್ ಪ್ರದೇಶದಲ್ಲಿ ರೈತರು ಗೋವಿನ ಜೋಳ ಬಿತ್ತನೆಯಾಗಿದೆ.

ADVERTISEMENT

ತಾಲ್ಲೂಕಿನ ಬೇಗೂರ ಗ್ರಾಮದ ಕೆಲವು ರೈತರು ದುಮ್ಮವಾಡ ಹಾಗೂ ತಬಕದಹೊನ್ನಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಕಂಪನಿಯ ಗೋವಿನ ಜೋಳ ಬಿತ್ತನೆ ಬೀಜದ ಒಂದು ಪಾಕೀಟ್‌ಗೆ ₹1,284 ನೀಡಿ ಖರೀದಿಸಿ ರೈತರು ಬಿತ್ತನೆ ಮಾಡಿದ್ದಾರೆ.

ಬೀಜ, ಗೊಬ್ಬರ, ಭೂಮಿ ಉಳುಮೆಗೆ ಲಕ್ಷಾಂತರ ಹಣ ಖರ್ಚು ಬಿತ್ತನೆ ಮಾಡಿ 15 ರಿಂದ 20 ದಿನಗಳು ಕಳೆದರೂ ಕೆಲವೇ ಬೀಜಗಳು ಮೊಳಕೆ ಒಡೆದಿವೆ. ಉಳಿದದ್ದು ಭೂಮಿಯಲ್ಲಿ ಪಂಗಸ್ ಬಂದಿವೆ ಎಂದು ರೈತರ ದೂರಾಗಿದೆ.

‘ದುಮ್ಮವಾಡ ರೈತ ಸಂಪರ್ಕ ಕೇಂದ್ರದಲ್ಲಿ ಕಂಪನಿಯೊಂದರ 14 ಪಾಕೀಟ್ ಬಿತ್ತನೆಯ ಗೋವಿನ ಜೋಳ ಖರೀದಿಸಿ 7 ಎಕರೆಯಲ್ಲಿ ಬಿತ್ತನೆ ಮಾಡಿದ್ದೇವೆ. ಕೆಲವು ಕಡೆ 50 ರಷ್ಟು ಬೀಜಗಳು ಮೊಳಕೆ ಒಡೆದಿಲ್ಲ. ಈ ಬಗ್ಗೆ ಸಂಬಂಧಿಸಿದ ಕಂಪನಿಯವರೆಗೆ ಹಾಗೂ ಕೃಷಿ ಕೇಂದ್ರಕ್ಕೆ ಮಾಹಿತಿ ನೀಡಲಾಗಿದೆ. ಆದರು ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ‘ ಎಂದು ಗ್ರಾಮದ ರೈತ ಗುರುಚನ್ನಯ್ಯ ಹಿರೇಮಠ ಅಳಲು ತೋಡಿಕೊಂಡರು.  

‘ದುಮ್ಮವಾಡ ರೈತ ಸಂಪರ್ಕ ಕೇಂದ್ರದಲ್ಲಿ ಬೀಜದ ಕೊರತೆಯಿಂದ ಅದೇ ಕಂಪನಿಯ ಬಿತ್ತನೆ ಬೀಜ ತಬಕದ ಹೊನ್ನಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ 12 ಪಾಕೀಟ್ ಖರೀದಿಸಿ 6 ಎಕ್ಕರೆ ಬಿತ್ತನೆ ಮಾಡಿದ್ದೆ, 50ರಷ್ಟು ಮೊಳಕೆ ಒಡೆದಿದೆ. ಹಾನಿಯಾದ ಬಗ್ಗೆ ಸೂಕ್ತ ಪರಿಹಾರ ನೀಡಬೇಕು‘ ಎಂದು ರೈತರಾದ ಶರಣಪ್ಪ ಮಲ್ಲೇಶಪ್ಪ ಚಳಮಟ್ಟಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.