ADVERTISEMENT

ಹುಬ್ಬಳ್ಳಿ: ಯುಗಾದಿ ದಿನದಂದು ಉಣಕಲ್‌ ಸಿದ್ದಪ್ಪಜ್ಜನ ಜಾತ್ರೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 8:03 IST
Last Updated 1 ಏಪ್ರಿಲ್ 2022, 8:03 IST
ಉಣಕಲ್ ಸಿದ್ದಪ್ಪಜ್ಜನ ರಥ
ಉಣಕಲ್ ಸಿದ್ದಪ್ಪಜ್ಜನ ರಥ   

ಹುಬ್ಬಳ್ಳಿ: ಯುಗಾದಿ ದಿನದಂದು ಸಂಜೆ 5.30ಕ್ಕೆ (ಏ.2) ಇಲ್ಲಿನ ಉಣಕಲ್ ಸಿದ್ದಪ್ಪಜ್ಜನ ರಥೋತ್ಸವ ನಡೆಯಲಿದೆ ಎಂದು ಪಂಚ ಕಮಿಟಿ ಅಧ್ಯಕ್ಷ ರಾಜಣ್ಣ ಕೊರವಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ರಥದ ಮೇಲೆ ಹೆಲಿಕಾಫ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಗುವುದು ಎಂದರು.

ಬೆಳಿಗ್ಗೆ 10.30ಕ್ಕೆ ಮಠದ ಕೈಲಾಸ ಮಂಟಪದಲ್ಲಿ ಸಾಮೂಹಿಕ ವಿವಾಹಗಳು ಜರುಗಲಿದ್ದು, ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು

ADVERTISEMENT

ಏ. 3 ರಿಂದ 5ರವರೆಗೆ ಸಂಜೆ 4ಕ್ಕೆ ಕುಸ್ತಿಗಳು ನಡೆಯಲಿವೆ. ₹20 ಸಾವಿರ (ಪ್ರಥಮ), ₹15 ಸಾವಿರ (ದ್ವಿತೀಯ), ₹10 ಸಾವಿರ (ತೃತೀಯ) ಬಹುಮಾನ ನೀಡಲಾಗುವುದು ಎಂದರು.

ಏ.6 ರಂದು ಎರಡೆತ್ತಿನಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಳಸ ಇಳಿಸಲಾಗುವುದು. ಗ್ರಾಮದ ಹಿರಿಯರನ್ನು ಸನ್ಮಾನಿಸುವುದರೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ ಎಂದರು.

ರಾಮಣ್ಣ ಪದ್ಮಣ್ಣವರ, ಅಡಿವೆಪ್ಪ ಮೆಣಸಿನಕಾಯಿ, ಶಿವಾಜಿ ಕನ್ನಿಕೊಪ್ಪ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.