ಎಂ.ಡಿ.ಪಲ್ಲವಿ, ಮೆಹಬೂಬಸಾಬ್
ಧಾರವಾಡ: ನಗರದ ಕಲಾ ಸಂವಹನ ಟ್ರಸ್ಟ್ ನೀಡುವ ಸಿತಾರ್ ಮಾಂತ್ರಿಕ ಉಸ್ತಾದ್ ಹಮೀದ್ ಖಾನ್ ಸಂಗೀತ ಸಾಧಕ ಪ್ರಶಸ್ತಿಗೆ ಗಾಯಕಿ ಎಂ.ಡಿ.ಪಲ್ಲವಿ ಹಾಗೂ ಸಿತಾರ್ ಮಾಂತ್ರಿಕ ಉಸ್ತಾದ್ ಹಮೀದ್ ಖಾನ್ ವಾದ್ಯ ನಿರ್ಮಾತೃ ಪ್ರಶಸ್ತಿಗೆ ಸಿತಾರ್ ವಾದ್ಯ ತಯಾರಕ ಮೆಹಬೂಬಸಾಬ್ ಸತಾರಮೇಕರ್ ಆಯ್ಕೆಯಾಗಿದ್ದಾರೆ.
‘ಎರಡೂ ಪುರಸ್ಕಾರಗಳು ತಲಾ ₹ 25 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿವೆ. ಉಸ್ತಾದ್ ಹಮೀದ್ ಖಾನ್ ಅವರ ಐದನೇ ಸ್ಮರಣೆ ಪ್ರಯುಕ್ತ ನಗರದ ಸೃಜನಾ ರಂಗಮಂದಿರದಲ್ಲಿ ಅಕ್ಟೋಬರ್ 12ರಂದು ನಡೆಯುವ ಸಂಗೀತೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಪ್ರಟಕಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.