ADVERTISEMENT

ವಾಸ್ಕೋಡಗಾಮ–ಚೆನ್ನೈ ವಿಶೇಷ ರೈಲು 26ರಿಂದ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 16:33 IST
Last Updated 17 ಆಗಸ್ಟ್ 2021, 16:33 IST

ಹುಬ್ಬಳ್ಳಿ: ವಾಸ್ಕೋಡಗಾಮ–ಎಂಜಿಆರ್‌ ಸೆಂಟ್ರಲ್‌ ಚೆನ್ನೈ ನಡುವೆ ವಾರಕ್ಕೆ ಒಂದು ದಿನ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಂಚಾರವನ್ನು ಆ. 26ರಿಂದ ಸೆ. 9ರ ವರೆಗೆ ನಡೆಸಲಾಗುವುದು ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಆ. 27ರಿಂದ ಸೆ. 10ರ ವರೆಗೆ ಚೆನ್ನೈನಿಂದ ವಾರಕ್ಕೊಂದು ಸಲ ರೈಲು ಸಂಚರಿಸಲಿದೆ.

ಈ ರೈಲು ವಾಸ್ಕೋಡಗಾಮದಿಂದ ಮಡಗಾಂವ್‌, ಕ್ಯಾಸೆಲ್‌ ರಾಕ್‌, ಲೋಂಡಾ, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರ, ಹರಿಹರ, ದಾವಣಗೆರೆ, ಬಿರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಶವಂತಪುರ, ಬಾಣಸಬಾಡಿ, ಕೆ.ಆರ್‌. ಪುರಂ, ಬಂಗಾರಪೇಟೆ ಹಾಗೂ ಜೋಲಾರಪೇಟೆ ಮಾರ್ಗದಲ್ಲಿ ಸಂಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT