ADVERTISEMENT

ವಿಬಿ–ಜಿ ರಾಮ್‌ ಜಿ: ಕಟಕಟೆಗೆ ಎಳೆಯಬೇಕಾದಿತು– ಸಿ.ಎಂ, ಡಿಸಿಎಂಗೆ ಜೋಶಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 20:48 IST
Last Updated 4 ಜನವರಿ 2026, 20:48 IST
<div class="paragraphs"><p> ಸಚಿವ ಪ್ರಲ್ಹಾದ್ ಜೋಶಿ</p></div>

ಸಚಿವ ಪ್ರಲ್ಹಾದ್ ಜೋಶಿ

   

ಹುಬ್ಬಳ್ಳಿ: ‘ಸರ್ಕಾರದ ಆಡಳಿತಾತ್ಮಕ ಹಿತದೃಷ್ಟಿಯಿಂದ ಕಾಲಕಾಲಕ್ಕೆ ಯೋಜನೆಗಳನ್ನು ಪರಿಷ್ಕರಿಸಿ ಪಾರದರ್ಶಕತೆ ತರುವುದು ಅಗತ್ಯವಾಗಿದ್ದು, ವಿಬಿ–ಜಿ ರಾಮ್‌ ಜಿ ಯೋಜನೆಯಡಿ ಮಾನವ ದಿನ ಹೆಚ್ಚಳ ಮಾಡಿ, ದಿನಗೂಲಿಯನ್ನು ₹370ಕ್ಕೆ ಏರಿಕೆ ಮಾಡಲಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಷ್ಕೃತ ಯೋಜನೆಯಡಿ ಕೂಲಿ ಕಾರ್ಮಿಕರ ಬಯೋಮೆಟ್ರಿಕ್ ಜಿಪಿಎಸ್ ಆಗುವುದರಿಂದ, ನೇರವಾಗಿ ಅವರ ಖಾತೆಗೆ ಕೂಲಿ ಹಣ ಸಂದಾಯವಾಗುತ್ತದೆ. ಮಧ್ಯವರ್ತಿಗಳ ಹಾವಳಿ ಇಲ್ಲದಿರುವುದು ಕಾಂಗ್ರೆಸ್‌ಗೆ ಸಂಕಟವಾಗಿದೆ. ಹೀಗಾಗಿ ಗಾಂಧೀಜಿ ಹೆಸರು ತೆಗೆಯಲಾಗಿದೆ ಎನ್ನುತ್ತ, ಆರೋಪಿಸುತ್ತಿದೆ’ ಎಂದು ಕಿಡಿಕಾರಿದರು.

ADVERTISEMENT

‘ವಿಬಿ ಜಿ ರಾಮ್‌ ಜಿ ಯೋಜನೆಯಡಿ 14 ದಿನದೊಳಗೆ ವೇತನ ಪಾವತಿ ಮಾಡದಿದ್ದರೆ, ಕಾರ್ಮಿಕರಿಗೆ ನಿರುದ್ಯೋಗ ಭತ್ಯೆ ಸೇರಿಸಿ ಕೂಲಿ ಪಾವತಿಸಬೇಕಾಗುತ್ತದೆ. ಯಾವ ಉದ್ಯೋಗ ಎನ್ನುವುದನ್ನು ಗ್ರಾಮ ಪಂಚಾಯಿತಿಯೇ ತೀರ್ಮಾನ ಮಾಡುತ್ತದೆ. ಯಾವುದೇ ಕಾರಣಕ್ಕೂ ಉದ್ಯೋಗ ಕಸಿದುಕೊಳ್ಳುತ್ತಿಲ್ಲ. ರಾಜಕೀಯಕ್ಕಾಗಿ ರಾಜ್ಯದ ಕಾಂಗ್ರೆಸ್‌ ಮುಖಂಡರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದರು.

‘ರಸ್ತೆ, ಗಟಾರ, ಕುಡಿಯುವ ನೀರು, ಶಾಲೆಗಳ ಅಭಿವೃದ್ಧಿ ಸೇರಿ ಮೂಲಸೌಲಭ್ಯದ ಬಗ್ಗೆ ಯೋಜನೆಯಲ್ಲಿ ಹೆಚ್ಚು ಒತ್ತು ನೀಡಲಾಗಿದೆ. 2047ರ ವಿಕಸಿತ ಭಾರತ ಗುರಿಯಾಗಿಟ್ಟುಕೊಂಡು ಗ್ರಾಮ ಭಾರತದ ಪ್ರಗತಿಗೆ ಆದ್ಯತೆ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಸಣ್ಣ ಕೈಗಾರಿಕೆಗಳು ಸಹ ಕಾರ್ಯನಿರ್ವಹಿಸಲು ಅವಕಾಶವಿದೆ. ಇದನ್ನು ಅರಿಯದ ಸಿದ್ದರಾಮಯ್ಯ ಗ್ರಾಮೀಣ ಭಾಗದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಆರೋಪಿಸುತ್ತಿದ್ದಾರೆ. ಈ ಮೂಲಕ ರಾಜ್ಯದ ಕೂಲಿ ಕಾರ್ಮಿಕರ ದಾರಿತಪ್ಪಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹು–ಧಾ ಮಹಾನಗರ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ, ಶಿವು ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.