
ಪ್ರಜಾವಾಣಿ ವಾರ್ತೆ
ಹುಬ್ಬಳ್ಳಿ: ಇಲ್ಲಿನ ವಿ.ಎಸ್. ಪಿಳ್ಳೆ ಇಂಗ್ಲಿಷ್ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಯರಗೊಪ್ಪ ರಾಷ್ಟ್ರಮಟ್ಟದ ವೀರಗಾಥಾ 5.0 ಸ್ಪರ್ಧೆಯಲ್ಲಿ ದೇಶದ 100 ಸೂಪರ್ ವಿಜೇತರ ಪೈಕಿ ಒಬ್ಬಳಾಗಿ ಹೊರಹೊಮ್ಮಿದ್ದಾಳೆ.
ಜ.24ರಂದು ದೆಹಲಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಸಾನ್ವಿಗೆ ₹10 ಸಾವಿರ ನಗದು, ಪದಕ ಹಾಗೂ ಪ್ರಮಾಣಪತ್ರ ನೀಡಲಾಯಿತು.
ವೀರಗಾಥಾ 5.0 ಸ್ಪರ್ಧೆಯಲ್ಲಿ 1.9 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಆಯ್ಕೆಯಾಗಿದ್ದ ಸಾನ್ವಿ, ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ವಿಶೇಷ ಆಹ್ವಾನಿತೆಯಾಗಿ ಪಾಲ್ಗೊಂಡಿದ್ದಳು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.