ADVERTISEMENT

ಹುಬ್ಬಳ್ಳಿ: ಈದ್ಗಾ ಮೈದಾನದ ದ್ವಾರದಲ್ಲಿ ಹಾಕಿದ್ದ ಸಾವರ್ಕರ್ ಫ್ಲೆಕ್ಸ್ ತೆರವು

ಮಹಾಮಂಡಳಿ ಫ್ಲೆಕ್ಸ್ ನಲ್ಲಿ ಉಳಿದ ಭಾವಚಿತ್ರ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2022, 14:20 IST
Last Updated 31 ಆಗಸ್ಟ್ 2022, 14:20 IST
ಹುಬ್ಬಳ್ಳಿಯ ಈದ್ಗಾ ಮೈದಾನದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ಹಿಂಭಾಗದಲ್ಲಿ ಅಳವಡಿಸಿರುವ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಫ್ಲೆಕ್ಸ್ ನಲ್ಲಿ ಬಾಲಗಂಗಾಧರ ತಿಲಕ್ ಮತ್ತು ವಿ.ಡಿ. ಸಾವರ್ಕರ್ ಅವರ ಭಾವಚಿತ್ರವನ್ನು ಅಳವಡಿಸಿರುವುದು.
ಹುಬ್ಬಳ್ಳಿಯ ಈದ್ಗಾ ಮೈದಾನದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ಹಿಂಭಾಗದಲ್ಲಿ ಅಳವಡಿಸಿರುವ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಫ್ಲೆಕ್ಸ್ ನಲ್ಲಿ ಬಾಲಗಂಗಾಧರ ತಿಲಕ್ ಮತ್ತು ವಿ.ಡಿ. ಸಾವರ್ಕರ್ ಅವರ ಭಾವಚಿತ್ರವನ್ನು ಅಳವಡಿಸಿರುವುದು.   

ಹುಬ್ಬಳ್ಳಿ: ನಗರದ ಈದ್ಗಾ ಮೈದಾನದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ಪೆಂಡಾಲ್ ನ ದ್ವಾರದ ಅಕ್ಕಪಕ್ಕದಲ್ಲಿ ಹಾಕಿದ್ದ ವಿ.ಡಿ. ಸಾವರ್ಕರ್, ಶಿವಾಜಿ ಹಾಗೂ ಭಗತ್ ಸಿಂಗ್ ಭಾವಚಿತ್ರಗಳ ಫ್ಲೆಕ್ಸ್ ಅನ್ನು ಮಹಾನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು.

ಗಣೇಶೋತ್ಸವಕ್ಕೆ ಪಾಲಿಕೆ ನೀಡಿದ್ದ ಷರತ್ತುಗಳ‌ ಉಲ್ಲಂಘನೆ ಹಿನ್ನೆಲೆಯಲ್ಲಿ ಸಿಬ್ಬಂದಿ ತೆರವು ಮಾಡಿದರು. ಆದರೆ, ಗಣೇಶ ಮೂರ್ತಿ ಹಿಂಭಾಗ ಅಳವಡಿಸಿರುವ ಮಹಾಮಂಡಳಿ ಹೆಸರನ್ನೊಳಗೊಂಡ ಫ್ಲೆಕ್ಸ್ ನಲ್ಲಿ ಬಾಲಗಂಗಾಧರ ತಿಲಕ್ ಮತ್ತು ಸಾವರ್ಕರ್ ಅವರ ಭಾವಚಿತ್ರ‌ ಹಾಗೆಯೇ‌‌ ಇತ್ತು.

ಸಂಜೆ ನಡೆದ ಮಹಾ ಮಂಗಳಾರತಿಯಲ್ಲಿ ಭಾಗವಹಿಸಿದ್ದ ಪಾಲಿಕೆ ಸದಸ್ಯರು ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರಿಗೆ ಸಾವರ್ಕರ್ ಭಾವಚಿತ್ರ ನೀಡಿ ಗೌರವಿಸಲಾಯಿತು.

ADVERTISEMENT

ಷರತ್ತಿನಲ್ಲಿ ಏನಿದೆ?: ಪಾಲಿಕೆ ವಿಧಿಸಿರುವ ಒಂಬತ್ತು ಷರತ್ತುಗಳಲ್ಲಿ ಪೆಂಡಾಲ್ ನಲ್ಲಿ ಗಣೇಶ ಮೂರ್ತಿ ಹೊರತುಪಡಿಸಿ ಬೇರಾವುದೇ ಮೂರ್ತಿ ಹಾಗೂ ಬ್ಯಾನರ್, ಫ್ಲೆಕ್ಸ್, ಭಾವಚಿತ್ರ ಹಾಗೂ ಜಾಹೀರಾತು ಹಾಕುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.