ADVERTISEMENT

ಕೊಳಲು ವಾದಕ ವೇಣುಗೋಪಾಲ ಹೆಗಡೆ ನಿಧನ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 14:12 IST
Last Updated 8 ಆಗಸ್ಟ್ 2024, 14:12 IST
ವೇಣುಗೋಪಾಲ ಹೆಗಡೆ
ವೇಣುಗೋಪಾಲ ಹೆಗಡೆ   

ಧಾರವಾಡ: ಇಲ್ಲಿನ ರಾಧಾಕೃಷ್ಣನಗರ‌ ನಿವಾಸಿ, ಕೊಳಲು ವಾದಕ ವೇಣುಗೋಪಾಲ ಎಸ್‌.ಹೆಗಡೆ (41) ಬುಧವಾರ ನಿಧನರಾದರು. ಅವರಿಗೆ ತಾಯಿ, ಪತ್ನಿ, ಪುತ್ರ ಇದ್ದಾರೆ.

ನಿತ್ಯಾನಂದ ಹಳದಿಪುರ ಅವರ ಶಿಷ್ಯರಾಗಿದ್ದ ವೇಣುಗೋಪಾಲ ಅವರು, ಕೊಳಲು ವಾದನದಲ್ಲಿ ಸಾಧನೆ ಮಾಡಿದ್ದರು. ಆಕಾಶವಾಣಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಮುಂಬೈನ ಐಟಿಸಿ ಸಂಶೋಧನಾ ಅಕಾಡೆಮಿಯ ಪ್ರಶಸ್ತಿ ಸಹಿತ ಹಲವು ಪುರಸ್ಕಾರಗಳು ಅವರಿಗೆ ಸಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT