ADVERTISEMENT

‘ಯೋಗ– ವ್ಯಾಯಾಮದಿಂದ ಆರೋಗ್ಯ’

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 2:10 IST
Last Updated 22 ಜೂನ್ 2022, 2:10 IST
ಕಲಘಟಗಿಯ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಯೋಗ ದಿನ ಕಾರ್ಯಕ್ರಮದಲ್ಲಿ ಶಾಸಕ ಸಿ. ಎಂ ನಿಂಬಣ್ಣವರ ಮಾತನಾಡಿದರು
ಕಲಘಟಗಿಯ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಯೋಗ ದಿನ ಕಾರ್ಯಕ್ರಮದಲ್ಲಿ ಶಾಸಕ ಸಿ. ಎಂ ನಿಂಬಣ್ಣವರ ಮಾತನಾಡಿದರು   

ಕಲಘಟಗಿ: ‘ನಿತ್ಯ ಯೋಗ–ವ್ಯಾಯಾಮ ಮಾಡುವುದರಿಂದ ಉತ್ತಮ ಆರೋಗ್ಯದ ಜೊತೆಗೆ ಸದೃಢ ದೇಹ ಹೊಂದಬಹುದು’ ಎಂದು ಶಾಸಕ ಸಿ. ಎಂ ನಿಂಬಣ್ಣವರ ಹೇಳಿದರು.

ತಾಲ್ಲೂಕ ಮಕ್ಕಳ ಸಾಹಿತ್ಯ ಪರಿಷತ್, ಆಯುಷ್ ಇಲಾಖೆ, ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಪಟ್ಟಣದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುರೇಶ ಕಳಸಣ್ಣವರ ಮಾತನಾಡಿ, ‘ಯೋಗವು ಮನಸ್ಸು ಮತ್ತು ದೇಹ ಸಂಪರ್ಕಿಸುವ ಪ್ರಾಚೀನ ಕಲೆಯಾಗಿದೆ’ ಎಂದು ಹೇಳಿದರು.

ADVERTISEMENT

ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಸ್ವಪ್ನಾ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ದಿವಾಣಿ ನ್ಯಾಯಾಧೀಶ ಜಿ.ಆರ್. ಶೆಟ್ಟರ, ದಿವಾಣಿ ನ್ಯಾಯಾಧೀಶ ಗಣೇಶ ಎನ್, ಸಿಪಿಐ ಶ್ರೀಶೈಲ ಕೌಜಲಗಿ, ಆಯುಷ್ ಅಧಿಕಾರಿ ಡಾ. ಬಿ.ಪಿ. ಪೂಜಾರಿ, ಉಮ್ಮೆಶ ಜೋಶಿ, ಪ್ರಕಾಶ ಲಮಾಣಿ, ಕಲ್ಲಪ್ಪ ಮಿರ್ಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.