ಕಲಘಟಗಿ: ತಿಪ್ಪೆ ಹಾಕುವ ವಿಷಯವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ತಾಲ್ಲೂಕಿನ ಕಲಕುಂಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಗ್ರಾಮದ ಜಗದೀಶ ಹನುಮಂತಪ್ಪ ತಾಂಬೆ (23) ಕೊಲೆಯಾದ ಯುವಕ. ಆರೋಪಿ ಗಳಾದ ದೇವಿಕೊಪ್ಪ ಗ್ರಾಮದ ಮಾಜಿ ಸೈನಿಕ ಗಂಗಾಧರ ನಿಂಗಪ್ಪ ನೂಲ್ವಿ (40) ಹಾಗೂ ಆತನ ಪತ್ನಿ ಶಾರದಾ ಗಂಗಾಧರ ಪಾಟೀಲ (38) ಅವರನ್ನು ಬಂಧಿಸಲಾಗಿದೆ. ಭಾನುವಾರ ಹೋಳಿಗಣಿ ಸರ್ಕಲ್ ಹತ್ತಿರ ಜಗಳವಾದಾಗ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ಸಹೋದರ ದೋಂಡಿಭಾ ತಾಂಬೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸಿಪಿಐ ವಿಜಯ ಬಿರಾದಾರ ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.