ADVERTISEMENT

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 9:00 IST
Last Updated 12 ಅಕ್ಟೋಬರ್ 2012, 9:00 IST

ನರಗುಂದ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ  ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಅಂಗನವಾಡಿ ಕಾರ್ಯಕರ್ತೆಯರ ಸಂಘದ  ತಾಲ್ಲೂಕು ಘಟಕದ  ಸದಸ್ಯರು ಮಿನಿ ವಿಧಾನಸೌಧದ ಎದುರು ಧರಣಿ ನಡೆಸಿ ನಂತರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.  

 ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಘಟಕದ ಮುಖಂಡರು  ಕಳೆದ ಹಲವಾರು ವರ್ಷಗಳಿಂದ  ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಗುತ್ತಿದೆ. ಆದರೂ ಸರಕಾರ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇಸಿಗೆ ರಜೆ ದಿನಗಳನ್ನು ಹೆಚ್ಚಿಸಬೇಕು.  ವೇತನವನ್ನು ತಿಂಗಳಿಗೆ ರೂ.10 ಸಾವಿರ ಹೆಚ್ಚಳ ಮಾಡಬೇಕು. ಅಂಗನವಾಡಿ ಸಮಯವನ್ನು ಪರಿಷ್ಕರಿ ಸಬೇಕು.  ವಿವಿಧ ಸೌಲಭ್ಯಗಳನ್ನು ಶೀಘ್ರವೇ ವಿಸ್ತರಿಸಬೇಕು. ಸಿ ಮತ್ತು ಡಿ ಗ್ರೂಪ್ ನೌಕರರಂತೆ ಅಂಗನವಾಡಿ ನೌಕರರನ್ನು ಪರಿಗಣಿಸ ಬೇಕು. ಸೇವಾ ವಧಿ ಹಿರಿತನದ ಆಧಾರದ ಮೇಲೆ ಪ್ರತಿ ವರ್ಷ ಎರಡು ನೂರು ರೂಪಾಯಿ  ಹಾಗೂ ಭತ್ಯೆ ನೀಡಬೇಕು. ಹಾಸಿಗೆ, ಸಮವಸ್ತ್ರ ನೀಡಬೇಕು. ಐಸಿಡಿಎಫ್ ಯೋಜನೆ  ಬಿಟ್ಟು ಬೇರೆ ಕೆಲಸಗಳಿಗೆ ನಿಯೋಜಿಸ ಬಾರದು. ಅಂಗ ವಾಡಿಗಳ ಮೇಲ್ವಿ ಚಾರಣೆಯನ್ನು ಖಾಸಗಿ ಸಂಸ್ಥೆಗೆ ವಹಿಸದೇ ಸರಕಾರವೇ ಮಾಡಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷೆ ಪ್ರತಿಭಾ ಕುರಂದ ವಾಡ, ವಿಜಯಲಕ್ಷ್ಮಿ ಕೆಂಚನಗೌಡ್ರ, ಶಾರದಾ ಹಳೇಮನಿ, ಚಾಂದಬೀಬಿ ಮುಲ್ಲಾ, ಗೀತಾ ದ್ಯಾವನಗೌಡ್ರ, ಲಕ್ಷ್ಮಿ ಗಾಯಕ ವಾಡ, ಸುಶಿಲಾ ನಾಗನೂರ, ತ್ರಿವೇಣಿ ಬನಪ್ಪನ ವರ, ಎಂ.ವಿ. ಮಠಪತಿ, ಡಿ.ವಿ.ಹಂಪಿಹೊಳಿ, ಎಫ್.ಎಂ.ಶಿರೋಳ ಮತ್ತಿತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT