ADVERTISEMENT

`ಅಂಗವಿಕಲ ಶಾಲಾ ಸಿಬ್ಬಂದಿ ಬೇಡಿಕೆ ಈಡೇರಿಸಿ'

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 7:57 IST
Last Updated 16 ಜುಲೈ 2013, 7:57 IST
ರಾಜ್ಯದ ಎಲ್ಲ ಅಂಗವಿಕಲ ಶಾಲೆಗಳ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶಿಕ್ಷಕರು ನಡೆಸುತ್ತಿರುವ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳ ಬೇಕು ಎಂದು ಮಾಜಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಕಳಕಪ್ಪ ಬಂಡಿ ಅವರಿಗೆ ರಾಜ್ಯ ಅಂಗವಿಕಲ ಶಾಲೆಗಳ ಹೋರಾಟ ಸಮಿತಿ ಸೋಮ ವಾರ ಮನವಿ ಸಲ್ಲಿಸಿತು.
ರಾಜ್ಯದ ಎಲ್ಲ ಅಂಗವಿಕಲ ಶಾಲೆಗಳ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶಿಕ್ಷಕರು ನಡೆಸುತ್ತಿರುವ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳ ಬೇಕು ಎಂದು ಮಾಜಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವ ಕಳಕಪ್ಪ ಬಂಡಿ ಅವರಿಗೆ ರಾಜ್ಯ ಅಂಗವಿಕಲ ಶಾಲೆಗಳ ಹೋರಾಟ ಸಮಿತಿ ಸೋಮ ವಾರ ಮನವಿ ಸಲ್ಲಿಸಿತು.   

ಗಜೇಂದ್ರಗಡ: ರಾಜ್ಯದ ಎಲ್ಲ ವಿಕಲ ಚೇತನ ಶಾಲೆಗಳ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ ವಿವಿಧ ಬೇಡಿಕೆಗಳ ಈಡೇರಿ ಕೆಗಾಗಿ ಶಿಕ್ಷಕರು ನಡೆಸುತ್ತಿರುವ ಹೋರಾಟದ ನೇತೃತ್ವವನ್ನು ವಹಿಸಿ ಕೊಳ್ಳಬೇಕು ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಅವರಿಗೆ ರಾಜ್ಯ ವಿಕಲ ಚೇತನ ಶಾಲೆಗಳ ಹೋರಾಟ ಸಮಿತಿ ಸೋಮವಾರ ಮನವಿ ಸಲ್ಲಿಸಿತು.

ಕಳೆದ ಹಲವು ವರ್ಷಗಳಿಂದ ರಾಜ್ಯದ ಬಹುತೇಕ ಅಂಗವಿಕಲ ಶಾಲೆಗಳ ಶಿಕ್ಷಕರು/ಸಿಬ್ಬಂದಿ ಸರ್ಕಾರ ಸೇವಾ ಭದ್ರತೆ ಒದಗಿಸಿಲ್ಲ. ಸಮರ್ಪಕ ವೇತನ ನೀಡುತ್ತಿಲ್ಲ. ಪರಿಣಾಮ ಅಂಗವಿಕಲರ ಶಾಲೆಗಳನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವ ಲಕ್ಷಾಂತರ ಶಿಕ್ಷಕರ ಹಾಗೂ ಸಿಬ್ಬಂದಿ ಬದುಕು ಡೋಲಾ ಯಮಾನ ಸ್ಥಿತಿಯಲ್ಲಿವೆ.

ಪ್ರಸಕ್ತ ಬಜೆಟ್‌ನಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಅಂಗವಿಕಲ ಶಾಲಾ ಶಿಕ್ಷಕ, ಸಿಬ್ಬಂದಿಗೆ ಸೇವಾ ಭದ್ರತೆ ಒದಗಿಸು ತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ರಾಜ್ಯ ವಿಕಲ ಚೇತನ ಶಾಲೆಗಳ ಸಿಬ್ಬಂದಿ ನಡೆಸುತ್ತಿರುವ ಹೋರಾಟಕ್ಕೆ ಬೆಂಗಾವಲಾಗಿ ನಿಲ್ಲಬೇಕು ಎಂದು ಮಾಜಿ ಸಚಿವರನ್ನು ಹೋರಾಟ ಸಮಿತಿ ಸದಸ್ಯರು ವಿನಂತಿಸಿದರು.

ರಾಜ್ಯ ಅಂಗವಿಕಲ ಶಾಲೆಗಳ ಹೋರಾಟ ಸಮಿತಿ ಸಲ್ಲಿಸಿದ ಮನವಿ ಸ್ವೀಕರಿಸಿದ ಮಾಜಿ ಸಚಿವ ಕಳಕಪ್ಪ ಬಂಡಿ, ಅನ್ಯಾಯದ ವಿರುದ್ಧದ ಯಾವುದೇ ಹೋರಾಟಕ್ಕೂ ಸಿದ್ಧ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬೇಡಿಕೆ ಗಳನ್ನು ಸಲ್ಲಿಸುವುದು ಪ್ರತಿಯೊಬ್ಬರ ಹಕ್ಕು. ಸರ್ಕಾರ ಪ್ರಜೆಗಳ ಹಕ್ಕು ಬಾಧ್ಯತೆಗಳಿಗೆ ತುಚಿ ಬಾರದಂತೆ ನಡೆದು ಕೊಳ್ಳಬೇಕು.

`ನಾನು ಸಚಿವನಾಗಿದ್ದ ವೇಳೆ ರಾಜ್ಯ ವಿಕಲ ಚೇತನ ಶಾಲೆಗಳ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ  ಸೇವೆಯನ್ನು ಖಾಯಂಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆ. ಆದರೆ, ಕೆಲ ತಾಂತ್ರಿಕ ಅಡಚಣೆಗಳಿದ್ದರಿಂದ ಆ ಕಾರ್ಯ ಸಾಧ್ಯವಾಗಲಿಲ್ಲ. ಅಂದಿನ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಅವರ ಗಮನಕ್ಕೆ ಅಂಗವಿಕಲ ಶಾಲಾ ಸಿಬ್ಬಂದಿ ವಾಸ್ತವ ಚಿತ್ರಣವನ್ನು ಸಮಗ್ರ ವಾಗಿ ವಿವರಿಸಿದ್ದೆ. ಅವರ ಬೇಡಿಕೆ ಈಡೇರಿಕೆಗೆ ಅವರು ಒಲವು ತೋರಿದ್ದರು' ಎಂದು ವಿವರಿಸಿದರು.

ರಾಜ್ಯ ಅಂಗವಿಕಲ ಶಾಲೆಗಳ ಹೋರಾಟ ಸಮಿತಿಗೆ ನ್ಯಾಯ ಕೊಡಿ ಸುವ ನಿಟ್ಟಿನಲ್ಲಿ ಪ್ರಾಮಾಣಿಕ ಹೋರಾಟಕ್ಕೆ ಸಿದ್ದ. ಯಾವುದೇ ಕಾರಣಕ್ಕೂ ಸಮಿತಿ ನನಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸಿ ಸಮಿತಿಯ ಸದಸ್ಯರಿಗೆ ನ್ಯಾಯ ದೊರಕಿಸಿಕೊಡ ಲಾಗುವುದು ಎಂಬ ಭರವಸೆ  ನೀಡಿದರು.

ಹೋರಾಟ ಸಮಿತಿ ಅಧ್ಯಕ್ಷ ಲಿಂಗರಾಜ ತಳಬಾಳ, ಎಸ್.ಬಸಪ್ಪ, ಎ.ಕೆ.ಕಡೆತೋಟದ, ಎ.ಸಿ.ಮರಡಿಮಠ, ವಿ.ಎಸ್.ಅಂಗಡಿ, ಡಿ.ಜಿ.ಕುಲಕರ್ಣಿ, ಬಿ.ಎಸ್.ಗಾಣಗೇರ, ವಿ.ಕೆ.ರೇಣುಕ ಮಠ, ಎಸ್.ವಿ.ಪಾಟೀಲ, ಆರ್.ಕೆ. ಬಾಗವಾನ, ಎಸ್.ಎಸ್.ಮುಂದಿನ ಮನಿ, ಎಸ್.ಕೆ.ರೇಣುಕಮಠ, ಎ.ಎಸ್. ಚಿಕ್ಕಮಠ, ಆರ್.ಕೆ.ನಂದಿಕೋಲ, ಡಿ. ಲಕ್ಷ್ಮಣ, ಎಂ.ವಿ.ಹರ್ಲಾಪೂರ,      ಎಸ್.ಎ.ಅರಮನಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.