ADVERTISEMENT

ಅಕ್ಕನ ಬದುಕು ಮಹಿಳೆಗೆ ಮಾದರಿ: ತೋಂಟದ ಸಿದ್ಧರಾಮ ಶ್ರೀ

ಅಕ್ಕನ ಬಳಗದ ಅಮೃತ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 15:11 IST
Last Updated 20 ಡಿಸೆಂಬರ್ 2018, 15:11 IST
ಗದುಗಿನಲ್ಲಿ ನಡೆದ ಅಕ್ಕನ ಬಳಗದ ಅಮೃತಮಹೋತ್ಸವ ಕಾರ್ಯಕ್ರಮದ ಅಂಗವಾಗಿ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಷಟ್‍ಸ್ಥಲ ಧ್ವಜಾರೋಹಣ ನೆರವೇರಿಸಿದರು
ಗದುಗಿನಲ್ಲಿ ನಡೆದ ಅಕ್ಕನ ಬಳಗದ ಅಮೃತಮಹೋತ್ಸವ ಕಾರ್ಯಕ್ರಮದ ಅಂಗವಾಗಿ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಷಟ್‍ಸ್ಥಲ ಧ್ವಜಾರೋಹಣ ನೆರವೇರಿಸಿದರು   

ಗದಗ: ‘12ನೇ ಶತಮಾನದಲ್ಲಿ ನೂರಾರು ವಚನಗಳನ್ನು ರಚಿಸಿದ ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ ಅವರ ಬದುಕಿನ ಆದರ್ಶ ಮಹಿಳೆಯರಿಗೆ ಮಾದರಿ’ ಎಂದು ತೋಂಟದಾರ್ಯ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಹೇಳಿದರು.

ಇಲ್ಲಿ ನಡೆದ ಅಕ್ಕನ ಬಳಗದ ಅಮೃತಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಷಟ್‍ಸ್ಥಲ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ‘ಅಕ್ಕಮಹಾದೇವಿಯ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಬಸವಣ್ಣ ಎಲ್ಲರಿಗೂ ಅಣ್ಣನೆನಿಸಿದರೆ, ಅಕ್ಕಮಹಾದೇವಿ ಅವರು ಅಕ್ಕಳಾದಳು’ ಎಂದರು.

‘ಮನುಷ್ಯ ದೇವರಲ್ಲಿ ನೇರವಾಗಿ ಸುಖವನ್ನು ಕೇಳುತ್ತಾನೆ. ಇದರಿಂದ ನಿಜವಾದ ಸಂತೋಷ ಸಿಗಲಾರದು. ಕಷ್ಟದಿಂದ ಅನಾನೂಕಲತೆ ಎದುರಾದಾಗ ಮನುಷ್ಯನಿಗೆ ಸುಖದ ಮಹತ್ವ ಅರಿವಾಗುತ್ತದೆ. ಅಕ್ಕನ ಬಳಗವು ಅಕ್ಕಮಹಾದೇವಿಯ ಮೌಲ್ಯಯುತವಾದ ವಿಚಾರಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದರು.

ADVERTISEMENT

ಶಾಂತಾದೇವಿ ಕೋಲೊಳಗಿ, ಶಿವಲೀಲಾ ಕುರುಡಗಿ, ಪಾರ್ವತಿ ಮಾಳೆಕೊಪ್ಪಮಠ, ಕಸ್ತೂರಿ ಹಿರೇಗೌಡರ, ಮೀನಾಕ್ಷಿ ಸಜ್ಜನರ, ರೇಣುಕಾ ಅಮಾತ್ಯ, ಶಕುಂತಲಾ ಮಠದ, ಲಲಿತಾ ಇಂಗಳಳ್ಳಿ, ಅಕ್ಕನ ಬಳಗದ ಅಧ್ಯಕ್ಷೆ ಪ್ರೇಮಾ ಮೇಟಿ, ಲಲಿತಾ ಬಾಳಿಹಳ್ಳಿಮಠ, ಶಾರದಾ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.