ADVERTISEMENT

ಈರುಳ್ಳಿ ಬೆಲೆ ಕುಸಿತ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 5:56 IST
Last Updated 13 ಡಿಸೆಂಬರ್ 2013, 5:56 IST

ಗದಗ: ನಗರದ ಎಪಿಎಂಸಿ ಮಾರು ಕಟ್ಟೆಯಲ್ಲಿ ಗುರುವಾರ ಈರುಳ್ಳಿ ಬೆಲೆ ದಿಢೀರ್‌ ಕುಸಿತ ಕಂಡಿದ್ದರಿಂದ ಆಕ್ರೋಶ ಗೊಂಡ ರೈತರು ಹಳೇ ಡಿಸಿ ಕಚೇರಿ ವೃತ್ತ ದಲ್ಲಿ ಜಮಾಯಿಸಿ ಸುಮಾರು ಎರಡು ತಾಸು ರಸ್ತೆತಡೆ ನಡೆಸಿ ಪ್ರತಿಭಟಿಸಿ ದರು. ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಅವಕ ಬಂದಿದ್ದು ಬುಧವಾರದರೆಗೆ  ₨ 2000 ರಿಂದ ₨ 2500 ವರೆಗೆ ಇದ್ದ ಇರುಳ್ಳಿ ಬೆಲೆ ದಿಢೀರ್‌ 1000 ವರೆಗೆ ಕಡಿಮೆ ಯಾಗಿದ್ದನ್ನು ಕಂಡ ರೈತರು  ಇರುಳ್ಳಿ ಮಾರುಕಟ್ಟೆಯ ಟೆಂಡರ್ ಪ್ರಕ್ರೀಯೆ  ಬಂದ್ ಮಾಡಿ ಇರುಳ್ಳಿ ಬೆಲೆ ಗರಿಷ್ಠ ₨ 3000 ರಿಂದ ಕನಿಷ್ಠ  ₨ 2000 ವರೆಗೆ  ಏರಿಸಬೇಕು ಎಂದು ಪಟ್ಟು ಹಿಡಿದರು. ಮೂರು ತಾಸು ಕಳೆದರೂ ಸಂಬಂಧ ಪಟ್ಟ ಅಧಿಕಾರಿಗಳು ಅತ್ತ ಕಡೆ ಸುಳಿಯ ದಿದ್ದಾಗ ಆಕ್ರೋಶಗೊಂಡ ರೈತರು ಹಳೇ ಡಿಸಿ ಕಚೇರಿ ವೃತ್ತದಲ್ಲಿ ರಸ್ತೆ  ತಡೆ ನಡೆಸಿ ಪ್ರತಿಭಟಿಸಿದರು.

ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ರೈತರ ಮನವೋಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬೆಳವಣಿಕೆಯ ರೈತ ಶರಣಪ್ಪ ಚೇಗರಡ್ಡಿ ಮಾತನಾಡಿ, ಮಾರುಕಟ್ಟೆಯಲ್ಲಿ ಇರುಳ್ಳಿ ಬೆಲೆ ಕಡಿಯಾಗಿಯಾಗಿದ್ದರೂ ತರಕಾರಿ ಮಾರುಕಟ್ಟೆಯಲ್ಲಿ ಈಗಲೂ ಇರುಳ್ಳಿ ಕೆಜಿಗೆ ರೂ 35-40 ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತರು ನೇರವಾಗಿ  ಶೋಷಣೆಗೆ ಒಳಗಾಗುತ್ತಿ ದ್ದಾರೆ. ರೈತರಿಗೆ ನ್ಯಾಯ ದೊರೆಯ ಬೇಕಾದರೆ ಗರಿಷ್ಠ ₨3000 ರಿಂದ ಕನಿಷ್ಠ ₨ 1000 ವರೆಗೆ ನಿಗದಿಪಡಿಸ ಬೇಕು ಎಂದು ಒತ್ತಾಯಿಸಿದರು.

ಅಂತಿಮವಾಗಿ ಎಪಿಎಂಸಿ  ಮಾರು ಕಟ್ಟೆಯ ಕಾರ್ಯದರ್ಶಿಎಂ ನಂಜುಂಡ ಸ್ವಾಮಿ ಸ್ಥಳಕ್ಕಾಗಮಿಸಿ ಅಂಗಡಿ ಮಾಲಿಕರು, ಖರೀದಾರ ರೊಂದಿಗೆ ಸಂಧಾನ ನಡೆಸಿ  ಇರುಳ್ಳಿ ಬೆಲೆಯನ್ನು ಗುಣಮಟ್ಟದ ಆಧಾರದ ಮೇಲೆ ಗರಿಷ್ಠ ₨ 2000 ರಿಂದ ಕನಿಷ್ಠ ₨  1000 ವರೆಗೆ ಖರೀದಿ ಮಾಡುವಂತೆ ಮನವಿ ಮಾಡಿದರು. ನಂತರ ಇರುಳ್ಳಿ ಖರೀದಿ ಪ್ರಕ್ರಿಯೆ ಪ್ರಾರಂಭಗೊಂಡು ಸಂಜೆ 7 ಗಂಟೆ ವರೆಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.