ADVERTISEMENT

ಒಡೆದು ಆಳಿದ ಸಿದ್ದರಾಮಯ್ಯ: ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2017, 8:55 IST
Last Updated 17 ಡಿಸೆಂಬರ್ 2017, 8:55 IST

ಗಜೇಂದ್ರಗಡ: ರಾಜ್ಯದಲ್ಲಿ ನಾಲ್ಕೂವರೆ ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾತಿ ರಾಜಕಾರಣದಲ್ಲಿ ಕಾಲ ಹರಣ ಮಾಡಿದೆ. ಮುಖ್ಯಮಂತ್ರಿ ಒಡೆದು ಆಳುವ ನೀತಿಯನ್ನು ತಮ್ಮ ಚಾಳಿಯಾಗಿಸಿಕೊಂಡಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆರೋಪಿಸಿದರು.

ಶುಕ್ರವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಡಳಿತಾವಧಿಯಲ್ಲಿ ಜಾತಿ– ಜಾತಿಗಳಲ್ಲಿ ವೈಷಮ್ಯ ಹುಟ್ಟಿಸುವ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಎಂಬುದು ಕಾಣೆಯಾಗಿದೆ. ರಾಜ್ಯದ ಜನ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವನ್ನು ಮೆಚ್ಚಿದ್ದು, ಮುಂದಿನ ಚುಣಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವದು ಖಚಿತ ಎಂದರು.

ಮಾಜಿ ಸಚಿವ ಕಳಕಪ್ಪ ಬಂಡಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಶೋಕ ವನ್ನಾಲ, ಭಾಸ್ಕರ ರಾಯಬಾಗಿ, ಬಿ.ಎಂ.ಸಜ್ಜನರ, ರಾಜು ಸಾಂಗ್ಲೀಕರ, ರಾಜೇಂದ್ರ ಘೋರ್ಪಡೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.