ADVERTISEMENT

‘ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ’

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 15:03 IST
Last Updated 24 ಜನವರಿ 2019, 15:03 IST
ರೋಣ ಪಟ್ಟಣದ ಶರಣಬಸವೇಶ್ವರ ಕಾಲೇಜಿನಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಲೇಖಕ ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿದರು
ರೋಣ ಪಟ್ಟಣದ ಶರಣಬಸವೇಶ್ವರ ಕಾಲೇಜಿನಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಲೇಖಕ ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿದರು   

ರೋಣ: ‘ದೇಶವನ್ನುಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಯುವಕರ ಪಾತ್ರ ಬಹು ಮುಖ್ಯವಾಗಿದ್ದು, ಯುವಕರು ಸ್ವಾಮಿ ವಿವೇಕಾನಂದ, ಸುಭಾಷಚಂದ್ರ ಬೊಸ್‍ರಂತಹ ಮಹಾನ್ ವ್ಯಕ್ತಿಗಳ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಧನೆಯ ಹಾದಿಯತ್ತ ಸಾಗಬೇಕು’ ಎಂದು ಲೇಖಕ ಮಲ್ಲಿಕಾರ್ಜುನ ಬಾಳಿಕಾಯಿ ಹೇಳಿದರು.

ಪಟ್ಟಣದ ಶರಣಬಸವೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಠಿಣ ಪರಿಶ್ರಮ, ಛಲದಿಂದಾಗಿ ತಮ್ಮ ಜೀವನದಲ್ಲಿ ದೊಡ್ಡ ವ್ಯಕ್ತಿಗಳಾಗಿ ಬೆಳೆಯುತ್ತಾರೆ. ಯಾರು ನೀರಿನಲ್ಲಿ ಸ್ನಾನ ಮಾಡುತ್ತಾರೆ ಅಂತಹ ವ್ಯಕ್ತಿಗಳು ಸಾಮಾನ್ಯರಾಗಿಯೇ ಇರುತ್ತಾರೆ, ಯಾರು ಬೆವರಿನಿಂದ ಸ್ನಾನ ಮಾಡುತ್ತಾರೆ ಅಂತಹ ವ್ಯಕ್ತಿಗಳು ಸಾಧಕರಾಗುತ್ತಾರೆ. ಸಾಧನೆಗೆ ಸತತ ಪರಿಶ್ರಮ ಅಗತ್ಯವಿದೆ. ಆದ್ದರಿಂದ ಯುವಕರು ಸಾಧಕರಾಗುವ ನಿಟ್ಟಿನಲ್ಲಿ ಶ್ರಮ ವಹಿಸಬೇಕು’ ಎಂದು ತಿಳಿಸಿದರು.

ADVERTISEMENT

ಕನಕದಾಸ ಶಿಕ್ಷಣ ಸಂಸ್ಥೆ ಗದಗ ಸಂಸ್ಥಾಪಕ ಅಧ್ಯಕ್ಷ ಬಿ.ಎಫ್.ದಂಡಿನ ಮಾತನಾಡಿ,‘ಇಂದಿನ ಯುವಕರು ನಾಳಿನ ದೇಶಕ್ಕೆ ಭದ್ರ ಬುನಾದಿಯಾಗಿದ್ದು, ತಮ್ಮ ಜೀವನದಲ್ಲಿ ಸಿಗುವಂತಹ ಶೈಕ್ಷಣಿಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಂಸ್ಥೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಹಾಗೂ ಕ್ರೀಡೆಗಳಲ್ಲಿ ಸಾಧನೆಗೈದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ’ ಎಂದರು.

ಶಕುಂತಲಾ ದಂಡಿನ, ಜಯಶ್ರೀ ಬೆನಕನವಾಡಿ, ಸಂಕೇತ ದಂಡಿನ, ಐ.ಬಿ.ದಂಡಿನ, ಎ.ಎಚ್.ನಾಯ್ಕರ, ಮಹೇಶ ಗೌಡರ, ಪಿ.ಎನ್.ಹಿರೇಮಠ, ಎಂ.ಎಸ್.ಬೋಗಾರ. ಪಿ.ಬಿ.ಪೊಲೀಸ್‍ಪಾಟೀಲ, ಅರುಣ ಶಿಂಘ್ರಿ, ಎಸ್.ಆರ್.ನದಾಫ್, ಎಸ್.ವಿ.ಶಿರಗುಂಪಿ, ಎಸ್.ವಿ.ಸಂಕನಗೌಡ್ರ, ಎಂ.ತಿ.ಆರ್ಯರ, ಅಶ್ವಿನಿ ಹಿರೇಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.