ADVERTISEMENT

ಕಾಲುವೆ ನವೀಕರಣಕ್ಕೆ ₹ 1120 ಕೋಟಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 7:39 IST
Last Updated 28 ನವೆಂಬರ್ 2017, 7:39 IST
ನರಗುಂದ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು
ನರಗುಂದ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು   

ನರಗುಂದ: ‘ರಾಜ್ಯ ಸರ್ಕಾರ ಕರ್ನಾಟ ಕದ ಇತಿಹಾಸದಲ್ಲಿಯೇ ಹಿಂದೆಂದೂ ನೀಡದ ಆದ್ಯತೆಯನ್ನು ನೀರಾವರಿಗೆ ನೀಡಿದೆ. ಮಲಪ್ರಭಾ ಕಾಲುವಗೆಳು ಇದ್ದು ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿತ್ತು. ರೋಣ, ನರಗುಂದ, ನವಲಗುಂದ ತಾಲ್ಲೂಕಿಗೆ ಹೊಂದಿಕೊಂಡ ಈ ಕಾಲುವೆಗಳ ನವೀಕರಣಕ್ಕೆ ₹ 1120 ಕೋಟಿ ನೀಡಲಾಗಿದೆ’ ಎಂದು ನೀರಾ ವರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

‘ಕಾಲುವೆ ನವೀಕರಣ ಸಂದರ್ಭದಲ್ಲಿ ಕಪ್ಪು ಮಣ್ಣು ಇರುವುದರಿಂದ ಇವು ಗಳನ್ನು ವಿಶೇಷವಾಗಿ ನಿರ್ವಹಿಸ ಬೇಕಿದೆ. ಆದ್ದರಿಂದ ಸಮೀಕ್ಷೆ ಮಾಡಿಸಿ ತಂತ್ರಜ್ಞರ ಮೂಲಕ ನಿರ್ಮಾಣ ಮಾಡಲಾಗು ವುದು. ರಾಜ್ಯದಲ್ಲಿ ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಹಿಂದೆ ಯಾವ ಸರ್ಕಾರಗಳು ಮಾಡದ ಸಾಧನೆಯನ್ನು ಕಾಂಗ್ರೆಸ್‌ ಸರ್ಕಾರ ಮಾಡುವ ಮೂಲಕ ನೀರಾವರಿಗೆ ₹1 ಲಕ್ಷ ಕೋಟಿ ನೀಡಿ ದಾಖಲೆ ನಿರ್ಮಿಸಿದೆ’ ಎಂದರು.

ADVERTISEMENT

‘ಬಿ.ಎಸ್‌.ಯಡಿಯೂರಪ್ಪನವರು ಡಿ.15ರೊಳಗೆ ಮಹದಾಯಿ–ಕಳಸಾ ಬಂಡೂರಿ ನೀರು ಹರಿಸುವುದಾಗಿ ಹೇಳಿದ್ದಾರೆ. ಅವರ ಮೇಲೆ ನಂಬಿಕೆ ಇಡೋಣ. ಅಲ್ಲಿಯವರೆಗೆ ಕಾದು ನೋಡೋಣ ಎಂದು ಹೇಳಿದ ಸಚಿವ ಪಾಟೀಲ, ಮಹದಾಯಿ ವಿಷಯದಲ್ಲಿ ಪ್ರಧಾನಿಗಳ ನಿಲುವು ಸಲ್ಲದು ಎಂದರು. ಮಹದಾಯಿಗೆ ರಾಜ್ಯ ಸರ್ಕಾರ ಎಲ್ಲ ಕೆಲಸ ಮಾಡಿದೆ. 2018ರ ಆಗಸ್ಟ್‌ನಲ್ಲಿ ನ್ಯಾಯಮಂಡಳಿ ಅವಧಿ ಮುಗಿಯಲಿದೆ. ನಮ್ಮ ಪರ ತೀರ್ಪು ಬರುವ ವಿಶ್ವಾಸ ಇದೆ’ ಎಂದರು.

ನರಗುಂದದಲ್ಲಿ 20 ಮೆಗಾವಾಟ್‌ನ ಸೋಲಾರ ಪಾರ್ಕ್‌ ನಿರ್ಮಾಣಕ್ಕೆ ಕ್ರಮ ವಹಿಸ ಞಲಾಗಿದೆ’ ಎಂದರು.
ಸಚಿವ ಎಚ್‌.ಕೆ.ಪಾಟೀಲ ಮಾತನಾಡಿ, ಶಾಸಕ ಬಿ.ಆರ್‌.ಯಾವಗಲ್‌ ಅವರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರ ಹಿಂದಿನ ಎಲ್ಲ ಅವಧಿಗಿಂತ ಹೆಚ್ಚಿನ ಕಾರ್ಯಕ್ರಮ ಗಳನ್ನು ಈ ಬಾರಿ ಸಿದ್ದರಾಮಯ್ಯನವರ ಮೂಲಕ ತರಲು ಸಾಧ್ಯವಾಯಿತು. ನಾಲ್ಕು ವರ್ಷಗಳಲ್ಲಿ ₹2 ಸಾವಿರ ಕೋಟಿಯ ಕಾಮಗಾರಿ ನರಗುಂದ ಮತಕ್ಷೇತ್ರದಲ್ಲಿ ಆಗಿದೆ. ಮಲಪ್ರಭಾ ಎಣ್ಣೆ ಗಿರಣಿ ನವೀಕರಣಕ್ಕೆ ₹8 ಕೋಟಿ ನೀಡಿದ್ದಾರೆ’ ಎಂದು ಶಾಸಕ ಬಿ.ಆರ್‌.ಯಾವಗಲ್‌ ಹೇಳಿದರು.

ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಗುಂಪುಗಳಿಗೆ ಸಹಾಯಧನ, ಪಶು ಭಾಗ್ಯ ಯೋಜನೆಯಡಿ ಮಂಜೂರಾತಿ ಪತ್ರ ವಿತರಣೆ, ಅಂಗವಿಲಕರಿಗೆ ತ್ರಿಚಕ್ರ ವಾಹನ ವಿತರಣೆ, ಭಾಗ್ಯಲಕ್ಷ್ಮಿ ಬಾಂಡ್‌ ವಿತರಣೆ ಮಾಡಲಾಯಿತು.

ಶಾಸಕ ರಾಮಕೃಷ್ಣ ದೊಡಮನಿ, ಬಸವರಾಜ ಹೊರಟ್ಟಿ, ಎನ್‌.ಎಚ್‌.ಕೋನರಡ್ಡಿ, ವೀರಣ್ಣ ಮತ್ತಿಕಟ್ಟಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಾಸಣ್ಣ ಕುರಡಗಿ, ಉಪಾಧ್ಯಕ್ಷೆ ರೂಪಾ ಅಂಗಡಿ, ರಾಜುಗೌಡ ಕೆಂಚನಗೌಡ್ರ, ರೇಣುಕಾ ಅವರಾದಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಉಪಾಧ್ಯಕ್ಷೆ ದೀಪಾ ನಾಗನೂರು, ಚಂಬಣ್ಣ ವಾಳದ, ರಾಜು ಕಲಾಲ ಜಿಲ್ಲಾಧಿಕಾರಿ ಮನೋಜ ಜೈನ್‌, ಎಸ್‌ಪಿ ಸಂತೋಷಬಾಬು ಇದ್ದರು.

ಸೈಕಲ್‌, ಸೀರೆ ಬಿಟ್ಟು ಏನೂ ಇಲ್ಲ
‘ಯಡಿಯೂರಪ್ಪನವರು ಸುಳ್ಳು ಹೇಳುತ್ತಲೇ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಹೇಳಲು ಸೈಕಲ್‌ ಹಾಗೂ ಸೀರೆ ಬಿಟ್ಟು ಏನೂ ಇಲ್ಲ. ಕೇಂದ್ರ ಸರ್ಕಾರ ₹ 2.50 ಕ್ಕೆ 1 ಯುನಿಟ್‌ ವಿದ್ಯುತ್‌ ನೀಡುತ್ತೇನೆಂದರೂ ರಾಜ್ಯ ಸರ್ಕಾರ ಖರೀದಿಸುತ್ತಿಲ್ಲ ಎಂದು ಹೇಳಿದ್ದು, ಅದು ನಿಜವಾಗಿದ್ದರೆ ನಾನೇ ನಿಮ್ಮ ಜೊತೆ ಬರುತ್ತೇನೆ ಅದನ್ನು ಕೊಡಿಸಿ’ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ ಸವಾಲೆಸೆದರು.

* * 

ಬಿ.ಎಸ್‌.ಯಡಿಯೂರಪ್ಪ ಅವರು ಡಿ.15ರೊಳಗೆ ಮಹದಾಯಿ –ಕಳಸಾ ಬಂಡೂರಿ ನೀರು ಹರಿಸುವುದಾಗಿ ಹೇಳಿದ್ದಾರೆ. ಅವರ ಮೇಲೆ ನಂಬಿಕೆ ಇಡೋಣ. ಅಲ್ಲಿಯವರೆಗೆ ಕಾದು ನೋಡೋಣ
ಎಂ.ಬಿ.ಪಾಟೀಲ, ನೀರಾವರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.