ADVERTISEMENT

ಚೆನ್ನಮ್ಮ ವಿಜಯೋತ್ಸವ: ಆಚರಣೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 6:45 IST
Last Updated 11 ಅಕ್ಟೋಬರ್ 2011, 6:45 IST
ಚೆನ್ನಮ್ಮ ವಿಜಯೋತ್ಸವ: ಆಚರಣೆಗೆ ನಿರ್ಧಾರ
ಚೆನ್ನಮ್ಮ ವಿಜಯೋತ್ಸವ: ಆಚರಣೆಗೆ ನಿರ್ಧಾರ   

ಗದಗ: ವೀರರಾಣಿ ಕಿತ್ತೂರ ಚೆನ್ನಮ್ಮ 188ನೇ ವಿಜಯೋತ್ಸವವನ್ನು ಸರ್ವ ಧರ್ಮ ಸಮಾಜದವರ ಸಹಕಾರದೊಂದಿಗೆ ಸಂಭ್ರಮದಿಂದ ಆಚರಿಸಲಾಗುವುದು ಎಂದು ಅಖಿಲ ಕರ್ನಾಟಕ ವೀರರಾಣಿ ಕಿತ್ತೂರು ಚೆನ್ನಮ್ಮ ಸರ್ವಧರ್ಮ ಸಮಾಜ ಸೇವಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ದೇಸಾಯಿ ಹೇಳಿದರು.

ನಗರದ ವೀರರಾಣಿ ಕಿತ್ತೂರ ಚೆನ್ನಮ್ಮ ಕಂಚಿನ ಪುತ್ಥಳಿ ಹತ್ತಿರದ ಉದ್ಯಾನದಲ್ಲಿ ಇತ್ತೀಚೆಗೆ ನಡೆದ ಕಿತ್ತೂರ ಚೆನ್ನಮ್ಮ ವಿಜಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಅಕ್ಟೋಬರ್ 24ರಂದು ವಿಜಯೋತ್ಸವವನ್ನು ವಿಭಿನ್ನ ಮತ್ತು ವೈಚಾರಿಕವಾಗಿ ಆಚರಿಸಲು ಚಿಂತನೆ ನಡೆಸಿದೆ. ಸಧ್ಯದಲ್ಲಿಯೇ ಕಾರ್ಯಕ್ರಮಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದರು.

ನಿವೃತ್ತ ಪ್ರಾಚಾರ್ಯ ಕೆ.ಎಚ್. ಬೇಲೂರ ಮಾತನಾಡಿ, ಕಿತ್ತೂರ ಚನ್ನಮ್ಮ ಸಾಹಸಗಾಥೆಯನ್ನು, ಬದುಕು ಮತ್ತು ಹೋರಾಟವನ್ನು ತಿಳಿಸುವ ಕಿರು ಪುಸ್ತಕ ಪ್ರಕಟ, ಕಿರು ನಾಟಕ ಪ್ರದರ್ಶಿಸುವುದು ಹಾಗೂ ಲೇಖನ, ಭಾಷಣ ಸ್ಪರ್ಧೆ ನಡೆಸಬೇಕು ಎಂದು ಸಲಹೆ ನೀಡಿದರು.

ಕವಿತಾ ದಂಡಿನ, ಸಿಜಿಬಿ ಹಿರೇಮಠ, ಬಸವಣ್ಣೆಯ್ಯ ಹಿರೇಮಠ, ಎನ್.ಕೆ. ಕೊರ್ಲಹಳ್ಳಿ, ನಿಸಾರಅಹಮ್ಮದ್ ಖಾಜಿ, ವಿ.ಕೆ. ಮಟ್ಟಿ, ಮಲ್ಲಿಕಾರ್ಜುನ ಪೂಜಾರ, ಷಣ್ಮುಖಪ್ಪ ಹುಂಬಿ, ಎಸ್.ಎಸ್. ಪಡೆಯಪ್ಪನವರ, ಮಹಾದೇವಪ್ಪ ಯಲಿಶಿರೂರ, ಬಸವರಾಜ ದೇಸಾಯಿ, ಚಂದ್ರು ರಾಯನಗೌಡರ, ಮಹಿಳಾ ಘಟಕದ ಪಾರ್ವತೆಮ್ಮ ದೇಸಾಯಿ, ಪುಷ್ಪಾ ಮಾಡಲಗೇರಿ, ಸುವರ್ಣ ಹೆಬ್ಬಳ್ಳಿ, ಎಸ್.ಎಸ್. ಪಡೆಯಪ್ಪನವರ, ಸಂಗಪ್ಪ ಕೊಟ್ಟೂರಶೆಟ್ಟರ, ಶಾಂತವ್ವ ಹತ್ತಿಕಾಳ, ಸರೋಜಾ ಕಲ್ಮಠ, ಪಾರ್ವತಿ ಅಂಗಡಿ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.