ADVERTISEMENT

ಡಿ ಗ್ರೂಪ್ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 8:21 IST
Last Updated 19 ಡಿಸೆಂಬರ್ 2012, 8:21 IST

ರೋಣ: ರಾಜ್ಯದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ವ್ಯಾಪ್ತಿ ಯಲ್ಲಿರುವ ಎಲ್ಲ ಇಲಾಖೆಗಳ ಸಿಬ್ಬಂದಿಗೆ ಪ್ರತಿ ತಿಂಗಳ ವೇತನ ಬಟ ವಾಡೆಗಾಗಿ ವೇತನ ಅನುದಾನ ಮಾಡಿ ಪ್ರತಿ ತಿಂಗಳು ವೇತನ ಪಡೆಯುವಂತೆ ಅನುಕೂಲ ಮಾಡಬೇಕು ಎಂದು ರಾಜ್ಯ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ವಿ.ಹಿರೇಮಠ ಸರಕಾರಕ್ಕೆ ಮನವಿ ಸಲ್ಲಿಸಿದರು.

ಮಂಗಳವಾರ ಕರ್ನಾಟಕ ರಾಜ್ಯ ಸರಕಾರಿ ಡಿ ಗ್ರೂಪ್ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಮುಖ್ಯಮಂತ್ರಿಗಳಿಗೆ ತಹಶೀಲ್ದಾರರ ಮುಖಾಂತರ ಮನವಿ ಸಲ್ಲಿಸಿ ಮಾತನಾಡಿದರು. ಹೊರಗುತ್ತಿಗೆ ಆಧಾರದ ನೇಮಕಾತಿ ಯನ್ನು ನಿಲ್ಲಿಸಬೇಕು.

ಈಗಾಗಲೇ ರಾಜ್ಯದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾಯಂಗೊಳಿಸುವಂತಾಗಬೇಕು. ಸರಕಾರದ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಡಿ ಗ್ರೂಪ್ ನೌಕರರ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು ಎಂದರು.

ನೌಕರರ ಸಂಘದ ಪದಾಧಿಕಾರಿ ಯಾದ ಎಸ್.ಆರ್. ದೊಡ್ಡಮನಿ ಮಾತನಾಡಿ, ಈ ನೌಕರರಿಗೆ ಪೊಲೀಸ್ ಇಲಾಖೆಯಲ್ಲಿರುವಂತೆ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸಬೇಕು. ಎಸ್‌ಎಸ್‌ಎಲ್‌ಸಿ ಪಾಸಾದ ನೌಕರರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮುಂಬಡ್ತಿ ನೀಡಬೇಕು. ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಮತ್ತು ಕಛೇರಿಯ ರಾತ್ರಿ ಕಾವಲುಗಾರರಿಗೆ ಸರಕಾರಿ ರಜೆ ದಿನಗಳ ವಿಶೇಷ ವೇತನ ಂಜೂರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿ ರುವ ವಾಲಿಕಾರರನ್ನು ಗ್ರೂಪ್‌ಡಿ ನೌಕರರೆಂದು ಪರಿಗಣಿಸಿ ಖಾಯಂಗೊಳಿಸುವಂತಾಗಬೇಕು. ಈಗಾಗಲೇ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಮತ್ತು ನ್ಯಾಯಾ ಲಯದಲ್ಲಿ ಬಾಕಿ ಇರುವ ದಿನ ಗೂಲಿಗಳ ಪ್ರಕರಣಗಳನ್ನು ತಕ್ಷಣ ದಿಂದಲೇ ಜಾರಿಗೆ ಬರುವಂತೆ ಸಕ್ರಮ ಗೊಳಿಸುವಂತಾಗಬೇಕು ಎಂದರು.

ಈ ಸಮಯದಲ್ಲಿ ಸಂಘದ ಅಧ್ಯಕ್ಷ ಎಂ.ವಿ.ಪೂಜಾರ, ಉಪಾಧ್ಯಕ್ಷ ಎಚ್. ಕೆ.ಕಂಪೌಂಡರ, ಎಸ್.ಎಮ್‌ಹೊಸಗೌಡ್ರ, ಪದಾಧಿಕಾರಿಗಳಾದ ವಿ.ವಿ. ತಳವಾರ, ಎ.ಎನ್.ಚೌದರಿ, ಎಸ್.ಎಸ್,ದೇಸಾಯಿ, ಎಸ್.ಎನ್,ಹೂಗಾರ, ಕನಕವ್ವ ಸಂಗಟಿ, ಪ್ರಭು ಚಲವಾದಿ, ಯು.ಎಂ.ಗೋನಾಳ, ಎಸ್‌ಸಿ.ವಸ್ತ್ರದ, ಐ.ಆರ್.ನಿಲೂಗಲ್ಲ, ಎಸ್. ಡಿ.ಜಕ್ಕಣ್ಣವರ, ಎನ್.ಜಿ.ತಿಮ್ಮೋ ಪೂರ, ರೇಣುಕಾ ಚಕ್ರಸಾಲಿ, ಎಂ.ಎಚ್. ಮಾದರ, ಶಿವು ಮುಗಳಿ, ಎಚ್. ಜಿ.ಗೊನಾಳ, ಶಂಕ್ರಮ್ಮ ತಾರಮುಡ್ಡಿ, ಹುಸೇನಸಾಬ್ ಬಾಡಿನ ಮುಂತಾದವರು ಉಪಸ್ಥಿತರಿದ್ದರು.

ಪ್ರತಿಭಟನೆ: ಮನವಿ
ನರಗುಂದ
: ಪಟ್ಟಣದಲ್ಲಿ  ಡಿ ಗ್ರೂಪ್ ನೌಕರರು ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಮಂಗಳವಾರ ತಹಶೀ ಲ್ದಾರರಿಗೆ ಮನವಿ ಸಲ್ಲಿಸಿದರು.ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ಕೈಗೊಂಡ ಡಿ ಗ್ರೂಪ್ ನೌಕರರು ಶೀಘ್ರ ಸರಕಾರ ತಮ್ಮ ಸಮಸ್ಯೆಗಳತ್ತ ಗಮನಹರಿಸಬೇಕು.

ಪ್ರತಿ ತಿಂಗಳು ವೇತನ ಪಾವತಿಸಬೇಕು. ಬಜೆಟ್ ಬರುವವರೆಗೂ ಕಾಯಿಸದೆ ನಮ್ಮ ಜೀವನಕ್ಕೆ ಸಹಕಾರಿ ಯಾಗ ಬೇಕೆಂದು ಆಗ್ರಹಿಸಿದರು. ಪೊಲೀಸ್ ಇಲಾಖೆಯ ನೌಕರರಿಗೆ ವಿತರಿಸುವಂತೆ     ನಮಗೂ ಪಡಿತರ ವಸ್ತುಗಳನ್ನು  ನೀಡುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿ.ಎ.ಭೋಸಲೆ, ಎಸ್. ವಿ.ಕುಲಕರ್ಣಿ, ಎನ್.ಎಲ್.ಸೊಂ ಡೂರು, ಜಿ.ಐ. ನದಾಫ್, ಬೇಟಲಿ, ವಿ.ಬಿ.ಸಾಳುಂಕೆ, ಬಸಮ್ಮ ಗೋಡಿ, ದೇವಮ್ಮ ಹೂಗಾರ, ಪಿ.ವೈ.ಜಂಬಗಿ, ದೇಮವ್ವ ಪಾಟೀಲ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.