ADVERTISEMENT

ನಾಗರಾಳ ರೈತರಿಂದ ಬೈಕ್ ಜಾಥಾ

ಮಹಾದಾಯಿ ಹೋರಾಟಕ್ಕೆ ಬೆಂಬಲ; ಜನಪ್ರತಿನಿಧಿಗಳ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2016, 6:31 IST
Last Updated 18 ಆಗಸ್ಟ್ 2016, 6:31 IST
ನರಗುಂದದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಗೆ ನಾಗರಾಳ ಗ್ರಾಮದ ರೈತರು ಬೈಕ್ ಜಾಥಾ ಮೂಲಕ ಬಂದು ಬೆಂಬಲ ವ್ಯಕ್ತಪಡಿಸಿದರು
ನರಗುಂದದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಗೆ ನಾಗರಾಳ ಗ್ರಾಮದ ರೈತರು ಬೈಕ್ ಜಾಥಾ ಮೂಲಕ ಬಂದು ಬೆಂಬಲ ವ್ಯಕ್ತಪಡಿಸಿದರು   

ನರಗುಂದ: ಮಹಾದಾಯಿ ಸಲುವಾಗಿ ಕಳೆದ ಒಂದು ವರ್ಷದಿಂದ ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ರೈತರು  ಜೀವದ ಹಂಗು ತೊರೆದು ಹೋರಾಟ ಮಾಡು ತ್ತಿದ್ದಾರೆ. ಇದನ್ನು ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಇದನ್ನು ನಾವು ಸಹಿಸಲ್ಲ. ಕೂಡಲೇ ರೈತರ ಕೂಗಿಗೆ ಸ್ಪಂದಿಸಬೇಕು. ಇಲ್ಲವಾದರೆ ರಾಜೀನಾ ಮೆಗೆ ಮುಂದಾಗಬೇಕು ಎಂದು ಬದಾಮಿ ತಾಲ್ಲೂಕು ನಾಗರಾಳ ಗ್ರಾಮದ ಎಚ್.ಎ. ಪತ್ತಾರ ಆಗ್ರಹಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹಾ ದಾಯಿ ಧರಣಿಯ 399ನೇ ದಿನ ಬುಧವಾರ ಆಯೋಜಿಸಿದ್ದ ಬೈಕ್ ಜಾಥಾ ನಂತರ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಾಜಿ ಶಾಸಕ ಬಿ.ಎಂ. ಹೊರಕೇರಿ ಈ ಯೋಜನೆ ರೂಪಿಸಿದ್ದರು. ಅದನ್ನು ಸಾಕಾರಗೊಳಿಸಲು ನಾವು ಪಣ ತೊಟ್ಟಿ ದ್ದೇವೆ. ಈಗಾಗಲೇ ಹಲವಾರು ಹಂತ ದಲ್ಲಿ ಹೋರಾಟ ನಡೆದಿದೆ. ಆದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯೋಜನೆ ಜಾರಿಗೆ ಸ್ಪಂದಿಸುತ್ತಿಲ್ಲ. ರಾಜ ಕೀಯ ಪಕ್ಷಗಳು ಮೊಸಳೆ ಕಣ್ಣೀರು ಸುರಿ ಸುವುದನ್ನು ನಿಲ್ಲಿಸಬೇಕು. ಹೋರಾಟ ಅಡಗಿಸುವ ಕುತಂತ್ರ ಒಳ್ಳೆಯದಲ್ಲ ಎಂದು ಎಚ್ಚರಿಸಿದರು.

ರೈತರ ಮೇಲಿನ ಕೇಸಗಳನ್ನು ವಾಪಸ್ ಪಡೆಯಬೇಕು. ಘಟನೆಗೆ ಕಾರಣರಾದ ಉನ್ನತ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ನಾಗರಾಳದ ಹೊಳ ಬಸು ಹಾಳಕೇರಿ, ವಕೀಲ ರಮೇಶ ನಾಯ್ಕರ ನಾಗರಾಳ ಗ್ರಾ.ಪಂ ಸದಸ್ಯ ರಾದ ಮುತ್ತಪ್ಪ ಹಿರೇಕುರುಬರ, ಮುದಿ ಯಪ್ಪ ಮಜ್ಜಗಿ, ಸಂಜೀವಕುಮಾರ ದೇಸಾಯಿ, ರೈತರಾದ ಗೂಳಪ್ಪ ಗೋದಿ ಹುಗ್ಗಿ, ಎನ್.ಬಿ. ಹಿರೇಕುರುಬರ, ಮಲ್ಲೇಶ ಹಿರೇದೇವಪ್ಪನವರ, ಬಸವ ರಾಜ ಹಾನಾಪೂರ, ಸಿದ್ದಪ್ಪ ಕುರಿ, ಹನಮಗೌಡ ಗೌಡರ, ಹನಮಂತ  ಕಟ ಗೇರಿ, ಹೋರಾಟ ಸಮಿತಿ ಉಪಾಧ್ಯಕ್ಷ ಪರುಶರಾಮ ಜಂಬಗಿ, ಸಿ.ಎಸ್. ಪಾಟೀಲ, ಈರಣ್ಣ ಗಡಗಿಶೆಟ್ಟರ, ಯಲ್ಲಪ್ಪ ಗುಡದೇರಿ, ಎಸ್.ಬಿ. ಕೊಣ್ಣೂರು, ವಾಸು ಚವ್ಹಾಣ, ಪುಂಡಲೀಕ ಯಾದವ, ವೀರಣ್ಣ ಸೊಪ್ಪಿನ, ಕಾಡಪ್ಪ ಕಾಕನೂರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.