ADVERTISEMENT

ನಾಗಸಮುದ್ರದಲ್ಲಿ ಸ್ವಚ್ಚ ಗ್ರಾಮ ಆಂದೋಲನಕ್ಕೆ ಚಾಲನೆ

ರೋಟರಿ ಸೆಂಟ್ರಲ್‌ನಿಂದ ಗಾಂಧಿ ಜಯಂತಿ ಕಾರ್ಯಕ್ರಮ; ಸ್ವಚ್ಛತಾ ಅಭಿಯಾನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 7:45 IST
Last Updated 3 ಅಕ್ಟೋಬರ್ 2017, 7:45 IST
ನಾಗಸಮುದ್ರದಲ್ಲಿ ಸ್ವಚ್ಚ ಗ್ರಾಮ ಆಂದೋಲನಕ್ಕೆ ಚಾಲನೆ
ನಾಗಸಮುದ್ರದಲ್ಲಿ ಸ್ವಚ್ಚ ಗ್ರಾಮ ಆಂದೋಲನಕ್ಕೆ ಚಾಲನೆ   

ಗದಗ: ‘ದೇಶದ ಸ್ವಚ್ಚತೆಗೆ ಆದ್ಯತೆ ನೀಡುವ ಮೂಲಕ ಪ್ರದಾನಿ ನರೇಂದ್ರ ಮೋದಿ ಅವರು ಗಾಂಧೀಜಿ ಕಂಡ ಗ್ರಾಮ ಸ್ವರಾಜದ ಕನಸನ್ನು ನನಸು ಮಾಡಲು ಆದ್ಯತೆ ನೀಡಿದ್ದಾರೆ’ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.

ಗದಗ ತಾಲ್ಲೂಕಿನ ನಾಗಸಮುದ್ರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೆಂಟ್ ಆನ್ನಿಸ್, ಭುವನೇಶ್ವರಿ ಸೇವಾ ಸಂಸ್ಥೆ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಮ ಸ್ಚಚ್ಛತೆ ಮೂಲಕ ಜನರ ಆರೋಗ್ಯ ಕಾಪಾಡಲು ಪ್ರತಿಯೊಬ್ಬರು ಮುಂದೆ ಬರಬೇಕು. ಸ್ವಚ್ಛಭಾರತ ಅಭಿಯಾನವು ಸ್ಚಚ್ಛತೆಗೆ ಮಾತ್ರ ಸಿಮೀತವಾಗದೇ ಗ್ರಾಮದ ಸಮಗ್ರ ಅಭಿವೃದ್ದಿಗೂ ಪ್ರೇರಣೆಯಾಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ರೋಟರಿ ಗದಗ ಸೆಂಟ್ರಲ್‍ನ ಪ್ರಭಾರ ಅಧ್ಯಕ್ಷ ವಿ.ಕೆ.ಗುರಮಠ ಮಾತನಾಡಿದರು. ‘ಗ್ರಾಮಗಳು ಸ್ವಚ್ಛವಾದರೆ ರಾಜ್ಯಗಳು ಸ್ವಚ್ಛವಾಗುತ್ತವೆ, ರಾಜ್ಯಗಳು ಸ್ವಚ್ಛವಾದರೆ ದೇಶ ಸ್ವಚ್ಛವಾಗುತ್ತದೆ’ ಎಂದರು.

ರೋಟರಿ ಸಹಾಯಕ ಗವರ್ನರ್‌ ಮಲ್ಲಿಕಾರ್ಜುನ ಐಲಿ ಮಾತನಾಡಿದರು. ‘ನಾಗಸಮುದ್ರದಲ್ಲಿ ಹಮ್ಮಿಕೊಂಡಿರುವ ಸ್ವಚ್ಚತಾ ಆಂದೋಲನಕ್ಕೆ ರೋಟರಿ ಕ್ಲಬ್‌ ವತಿಯಿಂದ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು’ ಎಂದರು.

ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಜು ಕುರಡಗಿ, ಸೆಂಟ್‍ಜಾನ್ಸ್‌ ಪ್ರೌಢಶಾಲೆಯ ಪ್ರಾಚಾರ್ಯ ಫಾಧರ್‌ ಪ್ರೆಡ್ಡಿರಾಜ್‌, ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಎಂ.ಎಸ್.ಕರಿಗೌಡ್ರ, ಸಿಸ್ಟರ್ ಆನಂದಿ, ಶಾಂತವ್ವ ಮಲ್ಲನಗೌಡ್ರ, ನೀಲಪ್ಪ ಕಡೆಮನಿ, ಲಕ್ಷಮವ್ವ, ಕಸ್ತೂರಮ್ಮ ಮರಿಗೌಡರ, ನಿಂಗಪ್ಪ. ಎಸ್.ಮಣ್ಣೂರ, ವಿರೂಪಾಕ್ಷಗೌಡ ಹನುಮಂತಗೌಡರ, ವಿ.ಬಿ.ಬಿಳೆಯಲಿ, ಶರಣಪ್ಪ ಮಾದನೂರ, ಸಂಗಪ್ಪ ಮಣ್ಣೂರ ಇದ್ದರು. ಎಂ.ಎಲ್.ಅಯ್ಯನಗೌಡ ನಿರೂಪಿಸಿದರು. ರೋಟರಿ ಕ್ಲಬ್ ಸೆಂಟ್ರಲ್ ಕಾರ್ಯದರ್ಶಿ ರಾಜು ರೋಖಡೆ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ಶಾಲಾ ಮಕ್ಕಳಿಂದ ಸ್ವಚ್ಛತೆ ಕುರಿತು ಬೀದಿ ನಾಟಕ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.