ನರಗುಂದ: ಕೇಂದ್ರ ಸರ್ಕಾರ ರಂಜಕ ಹಾಗೂ ಪೊಟ್ಯಾಶ್ ರಸಗೊಬ್ಬರಗಳ ಮಾರಾಟ ದರವನ್ನು ಕಡಿಮೆ ಮಾಡುವಂತೆ ತಯಾರಕರಿಗೆ ಸೂಚಿಸಿದೆ.
ಆದ್ದರಿಂದ ರಸಗೊಬ್ಬರ ತಯಾರಕರು ಸರ್ಕಾರದ ಸೂಚನೆ ಒಪ್ಪಿಕೊಂಡು ಕಡಿಮೆ ಬೆಲೆಗೆ ಮಾರಾಟ ಮಾಡಲು ಹಾಗೂ ಹಳೇ ದಾಸ್ತಾನನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ಒಪ್ಪಿರು ತ್ತಾರೆ.
ಆದ್ದರಿಂದ ಖಾಸಗಿ, ಸರಕಾರಿ ಸಂಘದ ಸಗಟು, ಚಿಲ್ಲರೆ ರಸಗೊಬ್ಬರದ ಮಾರಾಟಗಾರರು ಪರಿಷ್ಕೃತ ದರದಲ್ಲಿಯೇ ಮಾರಾಟ ಮಾಡುವಂತೆ ಸೂಚಿಸಲಾಗಿದೆ ಎಂದುಕೃಷಿ ಇಲಾ ಖೆಯ ಸಹಾಯಕ ನಿರ್ದೇಶಕ ಮಂಜು ನಾಥ ತಿಳಿಸಿದ್ದಾರೆ.
ಆದರೆ ಮಾರಾಟಗಾರರು ಪರಿಷ್ಕೃತ ಕಡಿಮೆ ದರದಲ್ಲಿ ಮಾರಾಟ ಮಾಡದೇ ಹೋದರೆ ಅಂಥವರ ಬಗ್ಗೆ ರೈತರಿಂದ ದೂರುಗಳ ಬಂದಲ್ಲಿ ರಸಗೊಬ್ಬರ ನಿಯಂತ್ರಣ -1985ರ ಅನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಜೊತೆಗೆ ಕೃಷಿ ಪರಿಕರ, ಬೀಜ ಹಾಗೂ ಕೀಟನಾಶಕಗಳನ್ನು ನಿಗದಿಪಡಿಸಿದ ದರದಲ್ಲಿಯೇ ಮಾರಾಟ ಮಾಡಬೇಕು. ಇಲ್ಲವಾದರೆ ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.