ADVERTISEMENT

ಪ್ರತಿಭೆ ಇದ್ದಲ್ಲಿ ಯಶಸ್ಸು: ಬಾಲಸುಬ್ರಹ್ಮಣ್ಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 5:45 IST
Last Updated 24 ಸೆಪ್ಟೆಂಬರ್ 2013, 5:45 IST

ನರಗುಂದ:  ಪದವಿ ಹಂತದ ಜೀವನ ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಪದವಿಗಳಿಗೆ ಇಂದು ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿದೆ. ಕೆಲವೊಮ್ಮೆ ಇಂದಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಬೇಸರ ಮೂಡುತ್ತಿದೆ. ಆದ್ದರಿಂದ ಪ್ರತಿಭೆ ಇದ್ದಾಗ ಮಾತ್ರ ಅಂದುಕೊಂಡುದ್ದನ್ನು  ಸಾಧಿಸಲು ಸಾಧ್ಯ ಎಂದು  ಕವಿವಿ ವಿಭಾಗದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಬಾಲಸುಬ್ರಹ್ಮಣ್ಯ ಹೇಳಿದರು.  

ಪಟ್ಟಣದಲ್ಲಿ ಸೋಮವಾರ  ನಡೆದ  ಶ್ರೀ ಸಿದ್ಧೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಈ ಸಾಲಿನ ಒಕ್ಕೂಟ ಹಾಗೂ ಕ್ರೀಡಾ ಚಟುವಟಿಕೆಗಳ  ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಮಾನವ ಸಂಪನ್ಮೂಲದ ಸದ್ಬಳಕೆ ಯಾಗಬೇಕಿದೆ. ಭಾರತದಲ್ಲಿ ಸಾಕಷ್ಟು ಮಾನವ ಸಂಪನ್ಮೂಲ ಹಾಗೂ  ಪ್ರಾಕೃತಿಕ ಸಂಪನ್ಮೂಲ ಇದ್ದರೂ ನಿರೀಕ್ಷೆಗೆ ತಕ್ಕಂತೆ ಪ್ರಗತಿ ಹೊಂದಲು  ಆಗುತ್ತಿಲ್ಲ. ಇದರ ಬಗ್ಗೆ  ಪ್ರತಿಯೊಬ್ಬ ಭಾರತೀಯ ಪ್ರಜೆ ಆಲೋಚಿಸಬೇಕಿದೆ ಎಂದರು. 
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಆರ್‌. ಯಾವಗಲ್‌ ಮಾತನಾಡಿ,  ಉನ್ನತ ಶಿಕ್ಷಣದತ್ತ ಎಲ್ಲ ವಿದ್ಯಾರ್ಥಿಗಳು ಗಮನ ಹರಿಸಬೇಕು ಕಾಲೇಜಿಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು  ಒದಗಿಸುವುದಾಗಿ ಹೇಳಿದರು. 

ಪ್ರಾಚಾರ್ಯೆ ನೀಲಾಂಬಿಕಾ ಪಟ್ಟಣ ಶೆಟ್ಟಿ ಸ್ವಾಗತಿಸಿದರು. ಎನ್‌.ಎಸ್‌. ಕುರ್ಡೆಕರ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಅತಿಥಿಗಳಾಗಿ  ಚಂಬಣ್ಣ ವಾಳದ,  ಎಫ್‌.ವೈ.ದೊಡಮನಿ, ರಾಚಣ್ಣ ಅಸೂಟಿ, ವಿಠ್ಠಲ ಶಿಂಧೆ, ಎಸ್‌.ಬಿ.ದಂಡಿನ, ಬಿ.ಎನ್‌.ಜಗದ, ದ್ಯಾಮಣ್ಣ ಸವದತ್ತಿ, ಎನ್‌.ಡಿ. ವಡ್ಡಿಗೇರಿ, ಬಿ.ಎಫ್‌.ಆಯಟ್ಟಿ, ರಾಮ ಚಂದ್ರ ಪವಾರ, ಗೀತಾ ಘೋರ್ಪಡೆ, ರಮೇಶ ಕರಕನ್ನವರ, ವೆಂಕಣ್ಣ ಗುಜ ಮಾಗಡಿ, ಎಂ.ಡಿ.ಕಮತಗಿ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತ ರಿದ್ದರು.  ಶಿವುಕುಮಾರ ಅಂಗಡಿ, ಸುರೇಶ ಎಚ್‌.ಎಸ್‌.ಜಂಟಿಯಾಗಿ ನಿರೂಪಿಸಿ, ವಂದಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.