ADVERTISEMENT

ಬೋಧನೆಗೆ ಹಿನ್ನೆಡೆ: ವಿದ್ಯಾರ್ಥಿಗಳ ಪರದಾಟ

ಸಮರ್ಪಕವಾಗಿ ಪೂರೈಕೆಯಾಗದ ಪಠ್ಯಪುಸ್ತಕ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 7:09 IST
Last Updated 17 ಜೂನ್ 2013, 7:09 IST

ನರಗುಂದ: ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭವಾಗಿ ಎರಡು ವಾರ ಕಳೆದರೂ ತಾಲ್ಲೂಕಿನ ಶಾಲೆಗಳಿಗೆ ಸಮರ್ಪಕವಾಗಿ ಪಠ್ಯಪುಸ್ತಕಗಳು ಪೂರೈಕೆಯಾಗುತ್ತಿಲ್ಲ.

ಪಠ್ಯಪುಸ್ತಕಗಳು  ಸರಿಯಾಗಿ ಬಾರದ ಪರಿಣಾಮ ಶಿಕ್ಷಕರು ಬೋಧನೆ  ಮಾಡ ದಂತಹ  ಸ್ಥಿತಿ ಎದುರಾಗಿದೆ. ಜೊತೆಗೆ ವಿದ್ಯಾರ್ಥಿಗಳು ಪಾಲಕರು  ಪಠ್ಯಪುಸ್ತಕ ಗಳಿಗೆ ಪರದಾಡುವಂತಹ ದು:ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬೋಧ ನೆಗೆ ಹಿನ್ನಡೆಯಾಗಿದ್ದು   ಸರಕಾರದ ಹೇಳಿಕೆ  ಹುಸಿಯಾಗಿರುವುದಕ್ಕೆ ಸಾಕ್ಷಿ ಯಾಗಿವೆ. 

ಶಿಕ್ಷಣ ಇಲಾಖೆ  ಮಾರ್ಚ ತಿಂಗಳ ಕ್ಕಿಂತ  ಮೊದಲೇ ಮುಂದಿನ  ಶೈಕ್ಷಣಿಕ ವರ್ಷದ ಪುಸ್ತಕಗಳ ಬೇಡಿಕೆ ಪತ್ರವನ್ನು ತೆಗೆದುಕೊಂಡಿದ್ದೆ. ಆದರೂ ಬೇಡಿಕೆಗೆ ತಕ್ಕ ಹಾಗೆ  ಪಠ್ಯಗಳು ಯಾವುದೇ ಶಾಲೆಗೆ ಪೂರೈಕೆಯಾಗಿಲ್ಲ.

ಸರಕಾರದ ಅಧಿಕಾರಿಗಳು, ಶಿಕ್ಷಣ ಸಚಿವರು  ಸಚಿವರು ಮೇ ತಿಂಗಳ ಅಂತ್ಯದಲ್ಲಿಯೇ  ಎಲ್ಲ  ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಪೂರೈಸಲಾಗಿದೆ.  ಶಾಲಾ ಆರಂಭೋ ತ್ಸವದಂದೇ ಎಲ್ಲ ಪಠ್ಯಪುಸ್ತಕ ಗಳನ್ನು ವಿತರಿಸಲಾಗುವುದೆಂದು ಹೇಳಿಕೆ ನೀಡಿದೆ ಹೊರತು ಅದು ಜಾರಿ ಯಾಗದೇ ಹೇಳಿ  ಕೈ ಚೆಲ್ಲಿ ಕುಳಿತಂತಾಗಿದೆ.  

1ರಿಂದ10ನೇ ತರಗತಿಯ  ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಒಂದೆರಡು ತರಗತಿಗಳಿಗೆ ಸಂಪೂರ್ಣ ವಿಷಯಗಳ ಪುಸ್ತಕಗಳು ಪೂರೈಕೆಯಾಗ್ದ್ದಿದು ಬಿಟ್ಟರೆ ಉಳಿದ ಯಾವುದೇ ತರಗತಿಗೂ  ಸಂಪೂರ್ಣ ಪುಸ್ತಕಗಳು ಪೂರೈಕೆಯಾಗಿಲ್ಲ. ಇದ ರಿಂದ ಅರ್ಧಮರ್ಧ  ಪುಸ್ತಕಗಳು ಬಂದು ಮತ್ತಷ್ಟು ಗೊಂದಲಕ್ಕೀಡಾ ಗುವಂತಾಗಿದೆ. 

ಮುಖ್ಯವಾಗಿ ಈ ಶೈಕ್ಷಣಿಕ ವರ್ಷದಲ್ಲಿ 1,2, 6 ಹಾಗೂ 9ನೇ ತರಗತಿಗಳ ಪಠ್ಯಪುಸ್ತಕಗಳು ಮಾತ್ರ ಬದಲಾವಣೆಯಾಗಿವೆ. ಅದರ್ಲ್ಲಲಿ 1,2, ತರಗತಿಗಳ ಪುಸ್ತಕಗಳು ಕೆಲವಷ್ಟೇ ಪೂರೈಕೆಯಾಗಿವೆ.  6ನೇ ತರಗತಿಗೆ ಮೊದಲು ಅವಶ್ಯವಿರುವ  ಕೋರ ಸಬ್ಜೆಕ್ಟ್ ಮೊದಲನೇ ಸೆಮ್ ಪಠ್ಯ ಪೂರೈಕೆಯಾಗದೇ ನೇರವಾಗಿ 2ನೇ  ಸೆಮ್  ಪಠ್ಯ ಪೂರೈಕೆಯಾಗಿದ್ದು ಶಿಕ್ಷಣ ಇಲಾಖೆಯ ಕಾಳಜಿಗೆ ಸಾಕ್ಷಿಯಾಗಿದೆ.  9ನೇ ತರಗತಿಯಲ್ಲಿ  ಎರಡು ವಿಷಯದ ಪುಸ್ತಕಗಳು ಬರಬೇಕಾಗಿವೆ. ಇದು ಎಷ್ಟೊಂದು ಸರಿ  ಎಂದು ಶಿಕ್ಷಕರ, ಪಾಲಕರ ಅಸಮಾಧಾನಕ್ಕೆ  ಕಾರಣ ವಾಗಿದೆ.

ಪ್ರತಿಯೊಂದು ತರಗತಿಯಲ್ಲಿ ಒಂದು, ಎರಡು ವಿಷಯಗಳನ್ನು ಬಿಟ್ಟರೆ  ಉಳಿದ ವಿಷಯಗಳ ಪುಸ್ತಕ  ಬಂದಿಲ್ಲ.  ಜೊತೆಗೆ ಉರ್ದು ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮದ ಪಠ್ಯಗಳಲ್ಲಿ ಹೆಚ್ಚಿನ ತರಗತಿಗಳ ಪಠ್ಯ ಪೂರೈಕೆಯಾಗಿಲ್ಲ. ಇದರಿಂದ ಮತ್ತಷ್ಟು ಸಮಸ್ಯೆ ಉಂಟಾಗಿದೆ. ಹೀಗೆ ಪ್ರತಿ ವರ್ಷ ಪಠ್ಯಗಳು ವಿಳಂಬವಾಗಿ ಬರುವುದರಿಂದ ಶಿಕ್ಷಕರಿಗೆ  ಸರಿಯಾದ ರೀತಿಯಲ್ಲಿ ಬೋಧನೆ ಮಾಡಲಾಗದ ಸ್ಥಿತಿ ಎದು ರಾಗುತ್ತದೆ.  ಪಠ್ಯಕ್ರಮವನ್ನು ನಿಯ ಮಿತವಾಗಿ ಮುಗಿಸದೇ ಬೇಗ ಮುಗಿ ಸುವುದು ಅನಿವಾರ್ಯವಾಗುತ್ತದೆ.

ಇದರಿಂದ ಗುಣಾತ್ಮಕ  ಶಿಕ್ಷಣ ದೊರೆಯದ ಪರಿಸ್ಥಿತಿ ನಿರ್ಮಾಣ ವಾಗುತ್ತದೆ.  ಇದರ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳ ಪಾಟೀಲರನ್ನು ಕೇಳಿದರೆ ` ತಾಲ್ಲೂಕಿನಲ್ಲಿಯ ಬಹುತೇಕೆ ಎಲ್ಲ ಶಾಲೆಗಳಿಗೆ ಶೇ.80ರಷ್ಟು ಪಠ್ಯಗಳು ಪೂರೈಕೆಯಾಗಿವೆ. ಉಳಿದ ಪಠ್ಯಪುಸ್ತಕ ಗಳು ಬೇಗನೇ ಪೂರೈಕೆಯಾಗಲು ಕ್ರಮ ಕೈಗೊಳ್ಳಲಾಗಿದೆ. ಇನ್ನು  ಒಂದು ವಾರದಲ್ಲಿ  ಎಲ್ಲ  ಪಠ್ಯಗಳನ್ನು ಪೂರೈಸ ಲಾಗುವುದು ಎಂದು ಪ್ರಜಾವಾಣಿಗೆ ತಿಳಿಸಿದರು. 

ಇದನ್ನು ನೋಡಿದರೆ ಪೂರ್ಣ ಪ್ರಮಾಣದ ಪಠ್ಯಗಳು ಪೂರೈಕೆಯಾ ಗಿಲ್ಲ.   ಹೀಗೆ ಶಿಕ್ಷಣ  ಇಲಾಖೆ ಪ್ರತಿ ವರ್ಷ ಪಠ್ಯ ಪುಸ್ತಕಗಳ ಪೂರೈಕೆಯಲ್ಲಿ  ಸಮಸ್ಯೆ ಉಂಟು ಮಾಡುತ್ತಾ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲಾಟವಾಡುತ್ತಿರುವುದು  ಕಾಣು ತ್ತಿದೆ. ಆದ್ದರಿಂದ ಈಗಲಾದರೂ ಜೂನ್ ಅಂತ್ಯದೊಳಗೆ  ಎಲ್ಲ ಪಠ್ಯಪುಸ್ತಕಗಳನ್ನು ಪೂರೈಕೆ  ಮಾಡಿ ವಿದ್ಯಾರ್ಥಿಗಳ-ಶಿಕ್ಷಕರ ಸಹಾಯಕ್ಕೆ ಬರಬೇಕಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.