ADVERTISEMENT

ಮರಳುಗಳ್ಳರಿಗೆ ವರವಾದ ಹಳ್ಳ!

​ಪ್ರಜಾವಾಣಿ ವಾರ್ತೆ
Published 12 ಜೂನ್ 2017, 9:16 IST
Last Updated 12 ಜೂನ್ 2017, 9:16 IST
ಲಕ್ಷ್ಮೇಶ್ವರ ಸಮೀಪದ ಪುಟಗಾಂವ್ ಬಡ್ನಿ ಹಳ್ಳದಲ್ಲಿನ ಮರಳನ್ನು ಅಕ್ರಮವಾಗಿ ಟ್ರ್ಯಾಕ್ಟರ್‌ಗಳಲ್ಲಿ ಸಾಗಿಸುತ್ತಿರುವುದು
ಲಕ್ಷ್ಮೇಶ್ವರ ಸಮೀಪದ ಪುಟಗಾಂವ್ ಬಡ್ನಿ ಹಳ್ಳದಲ್ಲಿನ ಮರಳನ್ನು ಅಕ್ರಮವಾಗಿ ಟ್ರ್ಯಾಕ್ಟರ್‌ಗಳಲ್ಲಿ ಸಾಗಿಸುತ್ತಿರುವುದು   

ಲಕ್ಷ್ಮೇಶ್ವರ: ಕಳೆದ ಇಪ್ಪತ್ತು ದಿನಗಳ ಹಿಂದೆ ರೋಹಿಣಿ ಮಳೆ ತಾಲ್ಲೂಕಿನಾದ್ಯಂತ ಭಾರೀ ಪ್ರಮಾಣದಲ್ಲಿ ಸುರಿದಿತ್ತು. ಆಗ ಮಾಗಡಿ–ಬಟ್ಟೂರು ಹಳ್ಳಕ್ಕೆ ಕಟ್ಟಿದ್ದ ಸಿರೀಜ್‌ ಚೆಕ್‌ ಡ್ಯಾಂಗಳ ಬದುವುಗಳು ಒಡೆದು ರಭಸವಾಗಿ ಹರಿದ ನೀರಿನ ಜತೆ ಸಾಕಷ್ಟು ಉಸುಕು ತೇಲಿ ಹೋಗಿತ್ತು. ಹೀಗೆ ನೀರಿನೊಂದಿಗೆ ತೇಲಿ ಬಂದ ಬಟ್ಟೂರು, ಪುಟಗಾಂವ್‌ ಬಡ್ನಿ ಹಳ್ಳದ ಉಸುಕು ಈಗ ಮರಗಳ್ಳರಿಗೆ ವರದಾನವಾಗಿ ಪರಿಣಮಿಸಿದೆ.

ನೀರಿನೊಂದಿಗೆ ತೇಲಿ ಹೋದ ಮರಳು ಬಟ್ಟೂರು ಹಳ್ಳದಲ್ಲಿ ಶೇಖರಣೆಗೊಂಡಿದ್ದು ಇದೀಗ ಇದರ ಮೇಲೆ ಮರಳುಗಳ್ಳರು ಮುಗಿ ಬಿದ್ದಿದ್ದಾರೆ. ಈಗ ಮತ್ತೆ ಹದಿನೈದು ದಿನಗಳಿಂದ ಮಳೆ ಆಗಿಲ್ಲ. ಹೀಗಾಗಿ, ಹಳ್ಳದಲ್ಲಿನ ಮರಳನ್ನು ಅಕ್ರಮವಾಗಿ ಸಾಗಿಸುವ ಜಾಲ ಸಕ್ರಿಯವಾಗಿದೆ. ಸದ್ಯ ನಿರಂತರವಾಗಿ ಹಳ್ಳದ ಲ್ಲಿನ ಮರಳನ್ನು ಟ್ರ್ಯಾಕ್ಟರ್‌ ಮೂಲಕ ಸಾಗಿಸಲಾಗುತ್ತಿದೆ.

ಬಟ್ಟೂರು ಹತ್ತಿರ ನಿರ್ಮಿಸಿರುವ 3ನೇ ಚೆಕ್‌ ಡ್ಯಾಂನ ವಿಶಾಲ ಅಂಗಳದಲ್ಲಿ ಗುಣಮಟ್ಟದ ಉಸುಕು ಸಂಗ್ರಹವಾಗಿದ್ದು, ಹಗಲು ರಾತ್ರಿ ಅದನ್ನು ಕೊಳ್ಳೆ ಹೊಡೆ ಯುವ ಕೆಲಸದಲ್ಲಿ ಕೆಲವರು ನಿರತರಾ ಗಿದ್ದಾರೆ. ಅಲ್ಲದೆ ಇನ್ನು ಕೆಲವರು ಚೆಕ್‌ ಡ್ಯಾಂನ ಗೋಡೆಗೆ ಹೊಂದಿಕೊಂಡಂತೆ ಮರಳನ್ನು ಬಗೆಯುತ್ತಿದ್ದಾರೆ. ಇದರಿಂದ ಚೆಕ್‌ ಡ್ಯಾಂಗಳಿಗೆ ಧಕ್ಕೆ ಉಂಟಾಗುವ ಭಯ ಎದುರಾಗಿದೆ.

ADVERTISEMENT

ರೈತರಿಗೆ ಬಿತ್ತನೆಗೆ ಅವಕಾಶ ಕೊಡ ದಂತೆ ಮರಳುಗಳ್ಳರು ಹೊಲಗಳ ಮಧ್ಯ ದಾರಿ ಮಾಡಿಕೊಂಡು ಉಸುಕು ಸಾಗಿಸು ತ್ತಿದ್ದಾರೆ. ಆದರೆ ಕೆಲ ರೈತರು ಉಸುಕು ಸಾಗಾಣಿಕೆದಾರರಿಂದ ಅಲ್ಪಸ್ವಲ್ಪ ಹಣ ತೆಗೆದುಕೊಂಡು ಟ್ರ್ಯಾಕ್ಟರ್‌ ತಮ್ಮ ಹೊಲ ದಲ್ಲಿ ಹೋಗುವುದಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ ಎಂಬ ಆರೋಪಗಳಿವೆ.

ಪುಟಗಾಂವ್‌– ಬಡ್ನಿ ಹಳ್ಳದಲ್ಲೂ ಸಾಕಷ್ಟು ಮರಳು ಶೇಖರಣೆ ಆಗಿದ್ದು ಅಲ್ಲಿಯೂ ಮರಳುಗಳ್ಳರು ಲಗ್ಗೆ ಇಟ್ಟಿ ದ್ದಾರೆ. ಇಲ್ಲಿ ರೈತರೇ ತಮ್ಮ ಹೊಲಗಳಲ್ಲಿ ಉಸುಕನ್ನು ದಾಸ್ತಾನು ಮಾಡಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಅಕ್ರಮವಾಗಿ ಮರಳು ಸಾಗಿಸುತ್ತಿರುವುದು ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆದರೆ, ಅವರು ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ, ಎಗ್ಗಿಲ್ಲದ ಸಾಗಣೆ ನಡೆದಿದೆ.

‘ನಮ್ಮೂರಾಗ ಹೇಳ್ದ ಕೇಳ್ದ ಹಳ್ಳ ದಾಗಿನ ಉಸುಕ ಸಾಗಾಟ ಮಾಡಾಕ ತ್ತಾರ. ಹಗಲು– ರಾತ್ರಿ ಟ್ರ್ಯಾಕ್ಟರ್‌ನ್ಯಾಗ ಉಸಕ ತುಂಬಿ ಕಳಸಾಕತ್ತಾರ’ ಎಂದ ಹೆಸರು ಹೇಳಲು ಇಚ್ಛಿಸದ ಪುಟಗಾಂವ್‌ ಬಡ್ನಿ ಗ್ರಾಮದ ಯುವಕ ದೂರಿದರು. ‘ಈಗಲಾದರೂ ಸಂಬಂಧಿಸಿದ ಅಧಿ ಕಾರಿಗಳು ಇತ್ತ ಗಮನ ಹರಿಸಿ ಮರಳುಗ ಳ್ಳರಿಗೆ ಕಡಿವಾಣ ಹಾಕಬೇಕು’ ಎಂಬುದು ಸ್ಥಳೀಯರ ಆಗ್ರಹವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.