ADVERTISEMENT

ರಕ್ತದಾನದಿಂದ ಆರೋಗ್ಯ ವೃದ್ಧಿ: ಕೆ. ಅರುಂಧತಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 5:35 IST
Last Updated 14 ಸೆಪ್ಟೆಂಬರ್ 2011, 5:35 IST

ಮುಂಡರಗಿ: `ರಕ್ತದಾನ ಮಾಡುವುದು ಒಂದು ಪವಿತ್ರ ಕಾರ್ಯವಾಗಿದ್ದು 18 ವರ್ಷ ಮೇಲ್ಪಟ್ಟವರು ನಿರ್ಭಯವಾಗಿ ರಕ್ತದಾನ ಮಾಡುವ ಮೂಲಕ ಇತರರಿಗೆ ಜೀವದಾನ ಮಾಡಬೇಕು~ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಡಾ.ಕೆ. ಅರುಂಧತಿ ಹೇಳಿದರು.

 ಕಾಲೇಜು ಶಿಕ್ಷಣ ಇಲಾಖೆ, ಸ್ಥಳೀಯ ಜಗದ್ಗುರು ತೋಂಟದಾರ್ಯ ಸರಕಾರಿ ಪದವಿ ಕಾಲೇಜು, ಕ.ರಾ.ಬೆಲ್ಲದ ಕಾಲೇಜು, ಜ.ಅ.ಪದವಿ ಪೂರ್ವ ಕಾಲೇಜು ಹಾಗೂ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳ ಆಶ್ರಯದಲ್ಲಿ ಮಂಗಳವಾರ ಪುರಸಭೆ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಒಮ್ಮೆ ರಕ್ತದಾನ ಮಾಡಿದರೆ ಮೂರು ತಿಂಗಳೊಳಗೆ ಮಾನವನ ಶರೀರದಲ್ಲಿ ಮತ್ತೆ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಆ ಮೂಲಕ ದೇಹದಲ್ಲಿ ನವ ಚೈತನ್ಯ, ಉಲ್ಲಾಸ ಮೂಡುತ್ತದೆ. ಆದ್ದರಿಂದ ಯುವಜನತೆ ಯಾವುದೇ ಅಳುಕು, ಅಂಜಿಕೆ ಇಲ್ಲದೆ ರಕ್ತದಾನ ಮಾಡಬಹುದಾಗಿದೆ~ ಎಂದು ಅವರು ಸಲಹೆ ನೀಡಿದರು.

`ದೇಶದಲ್ಲಿ ಲಕ್ಷಾಂತರ ಬಡ ರೋಗಿಗಳು ರಕ್ತ ಹೀನತೆಯಿಂದ ಬಳಲುತ್ತಿದ್ದು, ಸಕಾಲದಲ್ಲಿ ರಕ್ತ ದೊರೆ ಯದೆ ಹಲವಾರು ರೋಗಿಗಳು ಸಾವನ್ನ ಪ್ಪುತ್ತಿದ್ದಾರೆ. ದೇಹದಲ್ಲಿ ಸದಾ ಉತ್ಪತ್ತಿ ಯಾಗುತ್ತಲೇ ಇರುವ ರಕ್ತವನ್ನು ದಾನ ಮಾಡುವ ಮುಖಾಂತರ ವಿದ್ಯಾ ರ್ಥಿಗಳು ಬಡ ರೋಗಿಗಳಿಗೆ ನೆರವಾ ಗಬೇಕು~ ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಿ.ಟಿ. ತಿಪ್ಪೇರುದ್ರಸ್ವಾಮಿ ಮಾತನಾ ಡಿದರು.
ಬಿ.ಬಿ. ಮಾಲಕಟ್ಟಿ, ಡಾ. ರುಕ್ಮಿಣಿ, ಉಪನ್ಯಾಸಕ ಸಿ.ಎಸ್. ಅರಸನಾಳ ಹಾಜರಿದ್ದರು. ಶಾರದಾ ಹುಳ್ಳಿ ಪ್ರಾರ್ಥಿ ಸಿದರು. ಅಶ್ವತ್ಥ್ ಯಾದವ್ ಸ್ವಾಗತಿ ಸಿದರು. ಶರಣಪ್ಪ ಕಡ್ಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.