ADVERTISEMENT

ಲಕ್ಷ್ಮೇಶ್ವರದಲ್ಲಿ ಎಸ್‌ಬಿಎಂ ಶಾಖೆ ಆರಂಭಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 7:20 IST
Last Updated 6 ಜುಲೈ 2012, 7:20 IST

ಲಕ್ಷ್ಮೇಶ್ವರ: ದಿನದಿಂದ ದಿನಕ್ಕೆ ಅಭಿ ವೃದ್ಧಿ ಹೊಂದುತ್ತಿರುವ ಪಟ್ಟಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಶಾಖೆ ಆರಂಭಿಸಬೇಕು ಎಂದು ಒತ್ತಾ ಯಿಸಿ ಪುರಸಭೆ ಮಾಜಿ ಅಧ್ಯಕ್ಷ ಎನ್. ಜಿ. ಹೊಂಬಳ ಅವರು ಈಚೆಗೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ವಿ.ಲಕ್ಷ್ಮಣರಾವ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಎಲ್ಲ ವರ್ಗದ ಜನರೂ ಬ್ಯಾಂಕಿನ ಮೂಲಕವೇ ವ್ಯವಹಾರ ಮಾಡುತ್ತಿದ್ದಾರೆ.
 
ಪಟ್ಟಣದ ಸ್ಟೇಟ್ ಬ್ಯಾಂಕಿನಲ್ಲಿ ಕೆಲಸದ ಒತ್ತಡದಿಂದಾಗಿ ವ್ಯವಹಾರ ನಿಧಾನ ಇದ್ದು ಸಮಯಕ್ಕೆ ಸರಿಯಾಗಿ ಸೇವೆ ಲಭ್ಯವಾಗುತ್ತಿಲ್ಲ. ಕಾರಣ ಪಟ್ಟಣದಲ್ಲಿ ಸ್ಟೇಟ್ ಆಫ್ ಮೈಸೂರಿನ ಶಾಖೆ ತೆರೆಯುವ ಅಗತ್ಯ ಇದೆ ಎಂದು ತಿಳಿಸಿದ ಅವರು ಶಾಖೆ ತೆರೆದರೆ ಪುರಸಭೆ ವತಿಯಿಂದ ಒಂದು ಕೋಟ ರೂಪಾಯಿ ಠೇವಣಿ ಇಡುವುದಾಗಿ ಅವರು ಪ್ರಕಟಿಸಿದರು.

ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ವಿ.ಲಕ್ಷ್ಮಣರಾವ್ ಮಾತನಾಡಿ ನಾಡಿನ ಪ್ರಸಿದ್ಧ ವ್ಯಕ್ತಿ ಸರ್. ಎಂ. ವಿಶ್ವೇಶ್ವ ರಯ್ಯ ಅವರು 1913ರಲ್ಲಿ ಮೈಸೂರಿ ನಲ್ಲಿ ಪ್ರಥಮವಾಗಿ ಬ್ಯಾಂಕು ತೆರೆದರು. ಅಂದಿನಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತ ಬ್ಯಾಂಕು ಇಂದು ಬೃಹದಾ ಕಾರವಾಗಿ ಬೆಳೆದು ನಿಂತಿದೆ.

ದೇಶದಲ್ಲಿ ಈಗ ಒಟ್ಟು 700 ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು ಅವುಗಳಲ್ಲಿ 500 ಶಾಖೆಗಳು ರಾಜ್ಯದಲ್ಲಿಯೇ ಸೇವೆ ಸಲ್ಲಿಸುತ್ತಿವೆ ಎಂದು ಹೇಳಿದ ಅವರು ಸಧ್ಯದಲ್ಲಿಯೇ ಬ್ಯಾಂಕು ತನ್ನ ನೂರನೇ ವರ್ಷಾಚರಣೆ ಆಚರಿಸಿಕೊಳ್ಳಲಿದ್ದು ನೂರನೇ ವರ್ಷದ ಪ್ರಥಮ         ಶಾಖೆಯನ್ನು ಲಕ್ಷ್ಮೇಶ್ವರದಲ್ಲಿ    ತೆರೆಯಲು ಪ್ರಯತ್ನಿಸಲಾಗುವುದು ಎಂದರು.

ಪುರಸಭೆ ಅಧ್ಯಕ್ಷೆ ಜಯಕ್ಕ ಕಳ್ಳಿ, ಸದಸ್ಯ ವಿ.ಜಿ. ಪಡಗೇರಿ, ಟಿ.ಎನ್. ಸಂಶಿ, ಮಲ್ಲಣ್ಣ ಮಹಾಂತಶೆಟ್ಟರ, ಸೋಮಣ್ಣ ಗಾಂಜಿ, ಶಕ್ತಿ ಕತ್ತಿ, ಮುಖ್ಯಾಧಿಕಾರಿ ವಿ.ಬಿ. ಬೂದಿಹಾಳ, ಬಸಣ್ಣ ಬೆಂಡಿಗೇರಿ, ಹರೀಶ ಸಾಲಿ, ನಾರಾಯಣ್ಣಪ್ಪ ಬೇವಿನಮರದ, ಚೆನ್ನಪ್ಪ ಕರಿಯತ್ತಿನ, ರಜು ಕುಂಬಿ ಮತ್ತಿತರರು ಹಾಜರಿದ್ದರು.
ಆನಂದ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.