ADVERTISEMENT

ಲಕ್ಷ್ಮೇಶ್ವರ: ದಸರಾ ಕ್ರೀಡಾಕೂಟ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 5:25 IST
Last Updated 16 ಸೆಪ್ಟೆಂಬರ್ 2011, 5:25 IST
ಲಕ್ಷ್ಮೇಶ್ವರ: ದಸರಾ ಕ್ರೀಡಾಕೂಟ ಉದ್ಘಾಟನೆ
ಲಕ್ಷ್ಮೇಶ್ವರ: ದಸರಾ ಕ್ರೀಡಾಕೂಟ ಉದ್ಘಾಟನೆ   

ಲಕ್ಷ್ಮೇಶ್ವರ: ಜಿಲ್ಲಾ ಪಂಚಾಯತ್ ಗದಗ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ, ತಾಲ್ಲೂಕು ಪಂಚಾ ಯತ್, ಗ್ರಾಮ ಪಂಚಾಯಿತಿ ಹಾಗೂ ಗ್ರಾಮದ ಎಲ್ಲ ಯುವಕ ಯುವತಿ ಮಂಡಳ ಗೊಜನೂರು, ತಾಲ್ಲೂಕು ಯುವ ಒಕ್ಕೂಟದ ಆಶ್ರಯ ದಲ್ಲಿ ಸಮೀಪದ ಗೊಜನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ತಾಲ್ಲೂಕು ಮಟ್ಟದ ಗ್ರಾಮೀಣ ಹಾಗೂ ದಸರಾ ಕ್ರೀಡಾಕೂ ಟಗಳ ಉದ್ಘಾಟನಾ ಸಮಾರಂಭ ಜರುಗಿತು.

ಯುವ ನಾಯಕ ಚಂದ್ರಶೇಖರ ಲಮಾಣಿ ಗುಂಡು ಎಸೆಯುವುದರ ಮೂಲಕ ಕ್ರೀಡಾಕೂಟ ಉದ್ಘಾಟಿಸಿ `ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆಗೆ ಪೂರಕವಾಗಿರುವ ದೇಶೀಯ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ.

ಇಂದಿನ ದಿನಗಳಲ್ಲಿ ಕ್ರಿಕೆಟ್ ಭರದಲ್ಲಿ ದೇಶೀಯ ಕ್ರೀಡೆಗಳು ನಶಿಸುತ್ತಿವೆ. ಕಬಡ್ಡಿ, ಕುಸ್ತಿ, ಖೋಖೋ, ಅಟ್ಯಾಪಟ್ಯಾದಂಥ ದೇಶೀಯ ಕ್ರೀಡೆ ಗಳನ್ನು ಪೋಷಿಸಬೇಕಾದ ಅವಶ್ಯಕತೆ ಇದೆ~ ಎಂದರು.

ಕ್ರೀಡಾಜ್ಯೋತಿ ಬೆಳಗಿಸಿದ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ `ಕ್ರೀಡೆ ಇಲ್ಲದ ಜೀವನ ಕೀಡೆಗೆ ಸಮಾನ. ಸೋಲು ಗೆಲುವು ಎಣಿಸದೆ ಎಲ್ಲ ಮಕ್ಕಳೂ ಕಡ್ಡಾಯವಾಗಿ ಆಟಗಳಲ್ಲಿ ಭಾಗವಹಿಸಬೇಕು.

ಇದರಿಂದ ನಮಗೆ ಆರೋಗ್ಯ ದೊರೆಯುತ್ತದೆ. ನಾವು ಆರೋಗ್ಯವಂತರಾಗಿದ್ದರೆ ಬದುಕಿ ನಲ್ಲಿ ಏನನ್ನಾದರೂ ಸಾಧಿಸ ಬಹುದು. ಕಾರಣ ಎಲ್ಲರೂ ಕ್ರೀಡೆಗಳಲ್ಲಿ ಸಕ್ರಿಯ ವಾಗಿ ಪಾಲ್ಗೊಳ್ಳಬೇಕು~ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವನಗೌಡ ಕಂಠಿಗೌಡ್ರ ಒಲಿಂಪಿಕ್ ಧ್ವಜಾರೋಹಣ ನೆರವೇರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಡಿ. ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಿಂಬಣ್ಣ ಮಡಿವಾಳರ, ತಿಮ್ಮರೆಡ್ಡಿ ಅಳವಂಡಿ, ಪರಮೇಶ್ವರ ಲಮಾಣಿ, ಶಂಕರಣ್ಣ ಕಾಳೆ, ಮಲ್ಲೇಶಪ್ಪ ಸಜ್ಜನ, ಎನ್.ಸಿ. ವಡಕಣ್ಣವರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಎಫ್. ದೊಡ್ಡಗೌಡ್ರ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.