ADVERTISEMENT

ಶಿಕ್ಷಣದಿಂದ ಉತ್ತಮ ಸಂಸ್ಕಾರ: ದೊಡ್ಡಗೌಡರ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 6:00 IST
Last Updated 21 ಮಾರ್ಚ್ 2012, 6:00 IST

ಗದಗ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಉತ್ತಮ ಸಂಸ್ಕಾರ ದೊರೆಯಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ದೊಡ್ಡಗೌಡರ ಅಭಿಪ್ರಾಯಪಟ್ಟರು.

ಸ್ಥಳೀಯ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಸಂಖ್ಯೆ 10 ರಲ್ಲಿ ಇತ್ತೀಚೆಗೆ ನಡೆದ `ಚಿಣ್ಣರ ಉತ್ಸವ~ ಕಾರ್ಯಕ್ರಮ ಹಾಗೂ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು  ಪ್ರಾಥಮಿಕ ಹಂತದಲ್ಲಿಯೇ ನೀಡಬೇಕು. ಶಾಲೆಯ ವಾತಾವರಣ ಕಲಿಕೆಗೆ ಪೂರಕ ವಾಗಿದ್ದು, ಶಿಕ್ಷಕರು ಮಕ್ಕಳ ಶ್ರೇಯೋ ಭಿವೃದ್ಧಿಗೆ ಶ್ರಮಿಸುತ್ತಿರುವುದು ಅಭಿನಂದ ನಾರ್ಹ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ ಅವರು `ಕ್ರಿಯಾ ಸಂಶೋಧನೆ~ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಮಕ್ಕಳ ಕಲಿಕೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು ಸಂಶೋಧನೆ ಮೂಲಕ ಕಠಿಣವಾದ ಕಲಿಕೆ ಸರಳ ಗೊಳಿಸುವ ವಿಧಾನ ಕುರಿತ ನಡೆಸಿದ ಕ್ರಿಯಾ ಸಂಶೋಧನೆಗಳು ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ ಎಂದರು.

ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಫ್. ಪೂಜಾರ, ನಗರಸಭೆ ಸದಸ್ಯ ಸದಾನಂದ ಪಿಳ್ಳಿ, ಎಸ್‌ಡಿಎಂಸಿ ಅಧ್ಯಕ್ಷ ಉಮೇಶ ಬಾರಕೇರ, ಪಿ.ಎಚ್. ತಳಗೇರಿ, ಎಂ.ಪಿ. ಚಿಂಚೇವಾಡಿ, ಎಸ್.ಎ. ಚಂದಪ್ಪನವರ, ಎಸ್.ವಿ. ಕುರಹಟ್ಟಿ, ಎಸ್.ಸಿ. ಹಾನಗಲ್, ಎ.ಎಚ್. ಹಾತಲಗೇರಿ, ಜಿ.ಆರ್. ಪಾಸ್ತೆ, ಎಸ್.ಆರ್. ಹಲಕುರ್ಕಿ ಮತ್ತಿತರರು ಹಾಜರಿದ್ದರು.
ಸಾಧಿಕ ಬೈರಕದಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಎಸ್.ಎನ್. ಬಳ್ಳಾರಿ ಸ್ವಾಗತಿಸಿದರು. ವಿ.ಆರ್. ಜಂಗಮನಿ ಕಾರ್ಯಕ್ರಮ ನಿರೂಪಿಸಿದರು. ಜೆ.ಜಿ. ಬಿಸರಳ್ಳಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.