ADVERTISEMENT

ಶಿಕ್ಷಣದಿಂದ ವ್ಯಕ್ತಿತ್ವ ವಿಕಸನ: ಚಂದ್ರಶೇಖರ ಲಮಾಣಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 6:20 IST
Last Updated 1 ಮಾರ್ಚ್ 2012, 6:20 IST

ಲಕ್ಷ್ಮೇಶ್ವರ: ಶಿಕ್ಷಣವೇ ಎಲ್ಲಕ್ಕೂ ಮೂಲವಾಗಿದ್ದು ಎಲ್ಲ ಪಾಲಕರು ಮಕ್ಕಳಿಗೆ ಶಿಕ್ಷಣ ದೊರೆಯುವ ವ್ಯವಸ್ಥೆ ಮಾಡಬೇಕು. ಉತ್ತಮ ಶಿಕ್ಷಣದಿಂದ ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ~ ಎಂದು ಯುವ ಧುರೀಣ ಚಂದ್ರಶೇಖರ ಲಮಾಣಿ ಹೇಳಿದರು.

ಸಮೀಪದ ಒಡೆಯರಮಲ್ಲಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಿದ ಮೊರಾರ್ಜಿ ದೇಸಾಯಿಯವರ ಜನ್ಮ ದಿನಾಚರಣೆ ಅಂಗವಾಗಿ ಹಳೆ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

`ಆಹಾರ, ನೀರು, ವಸತಿಯಂತೆ ಇಂದು ಶಿಕ್ಷಣವೂ ಅತೀ ಅಗತ್ಯವಾಗಿದೆ. ಶಿಕ್ಞಣದ ಬೆಳೆವಣಿಗೆಯಿಂದ ದೇಶದ ಅಭಿವೃದ್ಧಿ ಸಾಧ್ಯ~ ಎಂದು ತಿಳಿಸಿದರು.

ಶಿರಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹುಮಾಯೂನ್ ಮಾಗಡಿ `ಮೊರಾರ್ಜಿ ದೇಸಾಯಿಯವರು ಈ ದೇಶ ಕಂಡ ಅತ್ಯಂತ ಚಾಣಾಕ್ಷ ರಾಜಕಾರಣಿ ಹಾಗೂ ಆಡಳಿತಗಾರರು. ಅವರ ಜೀವನವೇ ಒಂದು ಹೋರಾಟವಾಗಿತ್ತು. 

 ಅವರ ತತ್ವ ಸಿದ್ಧಾಂತಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳವುದೇ ನಾವು ಅವರಿಗೆ ಸಲ್ಲಿಸುವ ಗೌರವ ವಾಗಿದೆ~ ಎಂದು ಹೇಳಿದ ಅವರು `ಮಕ್ಕಳು ತಾವು ಕಲಿತ ಶಾಲೆ ಹಾಗೂ ಕಲಿಸಿದ ಗುರುವನ್ನು ಎಂದಿಗೂ ಮರೆಯಬಾರದು ಎಂದದರು.

ದೇವರಿಗಿಂತ ಗುರು ದೊಡ್ಡವನು. ವಿದ್ಯೆ ಕಲಿಸಿ ನಮಗೆ ಅರಿವಿನ ದಾರಿ ತೋರುವ ಗುರುಗಳು ಎಂದೆಂದಿಗೂ ಪೂಜ್ಯನೀಯರು~ ಎಂದರು.

`ಲಕ್ಷ್ಮೇಶ್ವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು ಬಜಾರದಲ್ಲಿ ವಿದ್ಯಾರ್ಥಿಗಳು ಕಲಿ ಯುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

ಜನಪ್ರತಿನಿಧಿಗಳು ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು~ ಎಂದು ಶಿಗ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಣ್ಣ ಲಮಾಣಿ ಹೇಳಿದರು.


ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ, ಪುರಸಭೆ ಅಧ್ಯಕ್ಷೆ ಜಯಕ್ಕ ಕಳ್ಳಿ, ಬಿಇಓ ಅಂದಾನೆಪ್ಪ ವಡಗೇರಿ, ಪದ್ಮರಾಜ ಪಾಟೀಲ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಆರ್.ಡಿ. ಕಮ್ಮಾರ ಮಾತನಾಡಿದರು.

ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಬಿ.ಎನ್. ರಾಟಿ, ಪ್ರಾಚಾರ್ಯ ಡಿ.ಬಿ. ಅಡವಿ, ಶಿಗ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅಕ್ಕಮ್ಮ ಕೆರೂರ, ನೀಲಪ್ಪ ಪಶುಪತಿಹಾಳ, ವಿಠ್ಠಲ ನಾಯಕ, ನೀಲಪ್ಪ ಹತ್ತಿ ಮತ್ತಿತರರು ಹಾಜರಿದ್ದರು. ಅನಿತಾ ಬಂಡಿ ಸ್ವಾಗತಿಸಿದರು. ಸತೀಶ ಉಮಚಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT