ADVERTISEMENT

ಶಿಲಾ ಅವಶೇಷ ಪತ್ತೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 10:45 IST
Last Updated 10 ಸೆಪ್ಟೆಂಬರ್ 2011, 10:45 IST
ಶಿಲಾ ಅವಶೇಷ ಪತ್ತೆ: ಪ್ರತಿಭಟನೆ
ಶಿಲಾ ಅವಶೇಷ ಪತ್ತೆ: ಪ್ರತಿಭಟನೆ   

ಗದಗ: ಲಕ್ಕುಂಡಿ ಗ್ರಾಮದಲ್ಲಿ ಸಂಗ್ರಹಿಸಿಟ್ಟಿದ್ದ ಶಿಲಾ ಅವಶೇಷಗಳು  ಸಂಬಂಧಿಸಿದ ಅ–ಧಿಕಾರಿಗಳೇ ತಿಪ್ಪೆಗುಂಡಿಯಲ್ಲಿ ಹಾಕಿ ಅವಮಾನ ಮಾಡಿದ ಘಟನೆ ಬುಧವಾರ ನಡೆದಿದೆ.

ಈ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆಯ ಸಹಾಯಕ ಕಾರ್ಯನಿರ್ವಣಾಧಿಕಾರಿ ಕೃಷ್ಣಮೂರ್ತಿ ಅವರಿಗೆ ಛೀಮಾರಿ ಹಾಕಿದರು.   

ಇಲ್ಲಿನ ಮಾಣೀಕೇಶ್ವರ ದೇವಸ್ಥಾನದ ಆವರಣದಲ್ಲಿ ಹಲವಾರು ವರ್ಷಗಳಿಂದ ಸಂಗ್ರಹಿಸಿಟ್ಟಿದ್ದ ಐತಿಹಾಸಿಕ ಶಿಲಾ ಮೂರ್ತಿಗಳನ್ನು ಜೆಸಿಬಿ ಯಂತ್ರಗಳ ಮೂಲಕ ಮಹಿಳಾ ಶೌಚಾಲಯ ಎದುರಿಗೆ ಇರುವ ತಿಪ್ಪೆಗುಂಡಿಯಲ್ಲಿ  ಹಾಕಲಾಗಿತ್ತು. 500ಕ್ಕೂ ಹೆಚ್ಚು ಶಿಲಾ ಅವಶೇಷಗಳು ತಿಪ್ಪೆಗುಂಡಿಯಲಿ ್ಲಬಿದ್ದು ಹಾನಿಯಾಗಿರುವುದನ್ನು ಕಂಡು ರಕ್ಷಣಾವೇದಿಕೆಯ ಕಾರ್ಯಕರ್ತರು ಪ್ರತಿಭಟಿಸಿ ಕೃಷ್ಣಮೂರ್ತಿಯವರನ್ನು ತರಾಟೆಗೆ ತೆಗೆದುಕೊಂಡರು.

ಈ ಕುರಿತು ಮಾತನಾಡಿದ ರಕ್ಷಣಾ ವೇದಿಕೆಯ ಅಧ್ಯಕ್ಷ ಶರಣಪ್ಪ ಕಮತರ, ಎಂ ವಿ ಗಡ್ಡಿ, ಕುಮಾರಸ್ವಾಮಿ ಕಲ್ಮಠ `ಸಾವಿರಾರು ವರ್ಷಗಳ ಹಿಂದೆಯೇ ಭಗ್ನಗೊಂಡಿರುವ ದೇವಸ್ಥಾನದ ಅವಶೇಷಗಳು ಸಂಗ್ರಹಿಸಿಡಲಾಗಿತ್ತು. ಅಲ್ಲಿ ದೇವಸ್ಥಾನ ಇತ್ತು ಅನ್ನುವುದಕ್ಕೆ ಸಾಕ್ಷಿ ಇರುವ ಅವಶೇಷಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಭಗ್ನ ಗೊಂಡಿರುವುದು ಖಂಡನಾರ್ಹ~ ಎಂದರು.

ಮಾಣಿಕೇಶ್ವರ ದೇವಸ್ಥಾನದ ಆವರ ಣದಲ್ಲಿ ಉದ್ಯಾನ ನಿರ್ಮಾಣದ ನೆಪದಲ್ಲಿ ಇತಿಹಾಸದ ಭಾಗವಾಗಿರುವ ಕಲ್ಲುಗ ಳನ್ನು ಕಿತ್ತ ಸಿಬ್ಬಂದಿಯ ಧೋರಣೆಯನ್ನು ಪ್ರತಿಭಟನಾಕಾರರು ತೀವ್ರವಾಗಿ ಟೀಕಿಸಿದರು. ಅವಶೇಷಗಳು ಸುರಕ್ಷಿತವಾದ ಸ್ಥಳಕ್ಕೆ ಸಾಗಿಸಬೇಕೆಂದು ಆಗ್ರಹಿಸಿದರು.

ಬಸನಗೌಡ ಬಿರಾದರ, ಕೃಷ್ಣ ಹಡಗಲಿ, ಎಂ ಆರ್ ವಡ್ಡರ, ಮನೋಹರ ಬಡಿಗೇರ, ಕಳಕಪ್ಪ ಟೆಂಗಿನ ಕಾಯಿ, ಹೊನ್ನಪ್ಪ ಹಾರೊಗೇರಿ, ಮಲ್ಲಪ್ಪ ಮುಸ್ಕಿನಬಾವಿ, ವೀರಣ್ಣ ಸೊರ ಟೂರ, ಶರಣಪ್ಪ ಉದ್ಧಾರ, ಅಶೋಕ ಮೇಟಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.