ADVERTISEMENT

ಸರ್ಕಾರಿ ಪಾಲಿಟೆಕ್ನಿಕ್ ಮಂಜೂರಾತಿಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 6:50 IST
Last Updated 16 ಜೂನ್ 2011, 6:50 IST

ಮುಳಗುಂದ: `ಸರ್ಕಾರಿ ಪ್ರೌಢ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಯ ಜೊತೆಗೆ ಬಹುದಿನಗಳಿಂದ ಬೇಡಿಕೆಯಿರುವ ಸರ್ಕಾರಿ ಪಿಯು, ಪಾಲಿಟೆಕ್ನಿಕ್ ಕಾಲೇಜುಗಳ ಮಂಜೂರಾತಿಗೆ ಶ್ರಮಿಸುವದಾಗಿ~ ಶಾಸಕ ಶ್ರೀಶೈಲಪ್ಪ ಬಿದರೂರ ಭರವಸೆ ನೀಡಿದರು.

ಇಲ್ಲಿಯ ಎಂಕೆಬಿಎಸ್ ಸಂಖ್ಯೆ 1ರಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಅಡಿ ಮಂಜೂ ರಾದ ಸರ್ಕಾರಿ ಪ್ರೌಢಶಾಲೆಯನ್ನು ಉದ್ಘಾಟಿಸಿ ಅವರು ಮತನಾಡಿದರು.

`ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಾರ್ವಜನಿಕರು ನನ್ನೊಂದಿಗೆ ಚರ್ಚಿಸಬೇಕು ಹಾಗೂ ಸರ್ಕಾರಿ ಪಿಯು, ಪಾಲಿಟೆಕ್ನಿಕ್ ಕಾಲೇಜುಗಳ ನಿರ್ಮಾಣಕ್ಕೆ ಅಗತ್ಯ ಜಮೀನು ನೀಡಲು ಸಹ ದಾನಿಗಳು ಮುಂದಾಗಬೇಕು~ ಎಂದು ಮನವಿ ಮಾಡಿದರು.

ಜಿ.ಪಂ ಅಧ್ಯಕ್ಷೆ ಚಂಬವ್ವ ಪಾಟೀಲ ಮಾತನಾಡಿ, `ಭವಿಷ್ಯದ ಉತ್ತಮ ಜೀವನಕ್ಕೆ ಶಿಕ್ಷಣ ಅಗತ್ಯವಿದ್ದು, ಆ ದಿಸೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರ ಜೊತೆಯಲ್ಲಿ ಪಾಲಕರು ಸಹ ಆಸಕ್ತಿ ವಹಿಸಿಬೇಕು~ ಎಂದು ಸಲಹೆ ನೀಡಿದರು.

ಜಿ.ಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ದೊಡ್ಡಗೌಡರ ಮಾತನಾಡಿದರು.
ಸಿ.ಬಿ. ಬಡ್ನಿ, ಟಿ. ಈಶ್ವರ, ಆರ್.ಎನ್. ದೇಶಪಾಂಡೆ ಮಾತ ನಾಡಿದರು.  ಪ.ಪಂ ಅಧ್ಯಕ್ಷೆ ಜಿ.ಎಸ್. ಲಕ್ಷ್ಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಉಪಾಧ್ಯಕ್ಷ ಎಸ್.ಎಂ. ನೀಲಗುಂದ, ಪ.ಪಂ ಉಪಾಧ್ಯಕ್ಷ ಬಿ.ವಿ. ಸುಂಕಾಪುರ, ಬಿಜೆಪಿ ಜಿಲ್ಲಾ ರೈತ ಮೊರ್ಚಾದ ಅಧ್ಯಕ್ಷ ಬುದ್ದಪ್ಪ ಮಾಡೊಳ್ಳಿ, ಎಂ.ಡಿ. ಬಟ್ಟೂರ, ಆರ್.ಸಿ. ಕಮಾಜಿ, ಬಿ. ಗುದ್ದಿನ, ಜಿಲ್ಲಾ ಸಮನ್ವಯ ಆಧಿಕಾರಿ ಎಂ.ಎ. ರಡ್ಡೇರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಂ. ವಡಗೇರ, ಸಿಆರ್‌ಪಿ ಎಂ.ಎಂ. ಮೆಗಲಮನಿ, ಎಸ್‌ಡಿಎಂಸಿ ಅಧ್ಯಕ್ಷ ಬಿ.ವಿ. ಕಣಾಸೂರ ಹಾಗೂ ಸದಸ್ಯರು ಹಾಜರಿದ್ದರು.

ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎಸ್.ಎಂ.ಉಜ್ಜಣ್ಣವರ ನಿರೂಪಿಸಿದರು. ಸಿ.ವಿ. ಗಂಗಾವತಿ ಸ್ವಾಗತಿಸಿದರು. ಜಿ.ಎಂ.ಗಲಗಲಿ ವಂದಿಸಿದರು.

ಪ್ರತಿಭಾ ಪುರಸ್ಕಾರ ಇಂದು
ಮುಳಗುಂದ: ಇಲ್ಲಿಗೆ ಸಮೀಪದ ಚಿಂಚಲಿ ಅಂಜುಮನ್-ಏ-ಇಸ್ಲಾಂ ಕಮಿಟಿ ಹಾಗೂ ರಾಜಾಬಾಗಸವಾರ ಕಮಿಟಿ ಸಹಯೋಗದಲ್ಲಿ ಇದೇ 16 ರಂದು ಗುರುವಾರ ಮಧ್ಯಾಹ್ನ 3ಕ್ಕೆ ಗ್ರಾಮದ ರಾಜಾಬಾಸವಾರ ದರ್ಗಾ ದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ.

ಐಎಎಸ್‌ನಲ್ಲಿ 83ನೇ ರ‌್ಯಾಂಕ್ ಪಡೆದ ಅರವಿಂದ ಎಂ ಬಂಗಾರಿ, ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದ ಇಸ್ರಾರ್‌ಬಾನು ಬಳ್ಳಾರಿ ಯುವ ಪ್ರತಿಭೆಗಳ ಸನ್ಮಾನ ಸಮಾರಂಭದ ಸಾನ್ನಿಧ್ಯವನ್ನು ನೀಲಗುಂದ ಗುದ್ನೇಶ್ವರ ಮಠದ ಪ್ರಭು ಲಿಂಗದೇವರು ಸ್ವಾಮೀಜಿ ವಹಿಸಲಿದ್ದು, ಅಂಜುಮನ್ ಕಮಿಟಿ ಅಧ್ಯಕ್ಷ ದಾವಲ್‌ಸಾಬ್ ಸಂದಿಮನಿ ಅಧ್ಯಕ್ಷತೆ ವಹಿಸುವರು.

ಸಿ.ಎಂ. ಅರಮನಿ,  ಎಸ್.ಎನ್. ಕತ್ತಿ, ಎನ್.ಎಂ. ಅರಮನಿ, ಸಿ.ಆರ್. ಕತ್ತಿ, ಸಿ.ಎಸ್. ಬಾಲರಡ್ಡಿ, ಚನ್ನಪ್ಪ ಗೌಡ್ರ ಮರಲಿಂಗ ಪ್ಪನವರ, ಎ.ಜಿ. ಕತ್ತಿ, ಗ್ರಾ.ಪಂ ಸದಸ್ಯ ಮಹೇಶ ಬಾಲರಡ್ಡಿ, ಸಾಬುದ್ದಿನ್‌ಸಾಬ ಕುದರಿ ಮೊತಿ,  ದಾವಲ್‌ಸಾಬ್ ನದಾಫ, ಮಾಬುಸಾಬ್ ಹಳೇಮನಿ, ಹುಸೇನ ಸಾಬ್ ಹಳೇಮನಿ, ರಾಜೇಸಾಬ್ ನದಾಫ ಮುಖ್ಯ ಅತಿಥಿಗಳಾಗಿ ಆಗಮಿ ಸುವರು ಎಂದು ಪ್ರಕಟಣೆ ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.