ADVERTISEMENT

‘ಮೂಲಸೌಕರ್ಯ ನೀಡುವಲ್ಲಿ ಮಲತಾಯಿ ಧೋರಣೆ ಸಲ್ಲ’

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 10:19 IST
Last Updated 28 ಜನವರಿ 2018, 10:19 IST

ಶಿರಹಟ್ಟಿ: ‘ಶಿರಹಟ್ಟಿ, ಮುಂಡರಗಿ ಹಾಗೂ ಲಕ್ಷ್ಮೇಶ್ವರಕ್ಕೆ ತಾರತಮ್ಯ ಎಸಗದೇ ಸಮನವಾಗಿ ಮೂಲ ಸೌಕರ್ಯಗಳನ್ನು ಒದಗಿಸಬೇಕು’ ಎಂದು ಕುಂದುಕೊರತೆ ಹೋರಾಟ ಸಮಿತಿಯ ಅಧ್ಯಕ್ಷ ಸಿದ್ರಾಮಯ್ಯ ಹಾವೇರಿಮಠ ಆಗ್ರಹಿಸಿದರು.

ನೂತನ ಲಕ್ಷ್ಮೇಶ್ವರ ತಾಲ್ಲೂಕಿಗೆ ಕೂಡಲೇ ಅಗತ್ಯ ಸೌಲಭ್ಯಗಳನ್ನು ಒದಗಿಸಿರುವುದು ಸ್ವಾಗತಾರ್ಹ. ಜತೆಗೆ ಶಿರಹಟ್ಟಿ ತಾಲ್ಲೂಕಿನ ಬಗ್ಗೆಯೂ ವಿಶೇಷ ಗಮನಹರಿಸಬೇಕು. ಮಲತಾಯಿ ಧೋರಣೆ ಕೈಬಿಡಬೇಕು’ ಎಂದರು. ‘ಮೂಲ ಸೌಲಭ್ಯಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳ, ಶಾಸಕರ ಇಚ್ಛಾಶಕ್ತಿಯ ಕೊರತೆಯಿಂದ ಜನರು ತುಂಬ ಸಮಸ್ಯೆ ಎದುರಿಸುತ್ತಿದ್ದಾರೆ. ಇದೇ ರೀತಿ ಮಲತಾಯಿ ಧೋರಣೆ ಮುಂದುವರಿಸಿದರೆ ಸಮಿತಿ ಉಗ್ರ ಪ್ರತಿಭಟನೆ ನಡೆಲಾಗುವುದು’ ಎಂದು ಸಮಿತಿಯ ಅಕ್ಬರ ಯಾದಗಿರಿ, ಶ್ರೀನಿವಾಸ ಕಪಟಕರ, ಮುನ್ನಾ ಡಾಲಾಯತ, ಶ್ರೀನಿವಾಸ ಬಾರ್ಬರ, ಜಾಕಿರ್‌ ಕೋಳಿವಾಡ, ಸಂಜೀವ ಹೆಸರಡ್ಡಿ, ಇಮ್ತಿಯಾಜ್‌ ಶಿಗ್ಲಿ ಎಚ್ಚರಿಕೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.