ADVERTISEMENT

ತುಂತುರ ಮಳೆ: ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 10:15 IST
Last Updated 8 ಫೆಬ್ರುವರಿ 2018, 10:15 IST
ಮುಳಗುಂದ ವ್ಯಾಪ್ತಿಯಲ್ಲಿ ಬುಧವಾರ ಮೋಡ ಕವಿದು ತುಂತುರು ಮಳೆಯಾದ ಹಿನ್ನೆಲೆಯಲ್ಲಿ ಜೋಳ, ಕಡಲೆ ಬಣವಿಗೆ ತಾಡಪಾಲ್ ಹೊದಿಸಲಾಗಿತ್ತು
ಮುಳಗುಂದ ವ್ಯಾಪ್ತಿಯಲ್ಲಿ ಬುಧವಾರ ಮೋಡ ಕವಿದು ತುಂತುರು ಮಳೆಯಾದ ಹಿನ್ನೆಲೆಯಲ್ಲಿ ಜೋಳ, ಕಡಲೆ ಬಣವಿಗೆ ತಾಡಪಾಲ್ ಹೊದಿಸಲಾಗಿತ್ತು   

ಮುಳಗುಂದ: ಪಟ್ಟಣ ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ತುಂತುರು ಮಳೆ ಸುರಿಯಿತು. ಇದರಿಂದ ಹಿಂಗಾರು ಬೆಳೆಗೆ ಹಾನಿ ಆಗುವ ಆತಂಕ ರೈತರನ್ನು ಕಾಡುತ್ತಿದೆ.

ಸದ್ಯ ಕಡಲೆ, ಜೋಳ, ಕುಸಬಿ, ಗೋದಿ ಬೆಳೆ ಒಕ್ಕುವ ಹಂತದಲ್ಲಿದ್ದು, ಕೆಲ ರೈತರು ಫಸಲನ್ನು ಕಿತ್ತು ಒಕ್ಕಲಿಗೆ ಅಣಿಗೊಳಿಸುತ್ತಿದ್ದಾರೆ. ಈ ಹಂತದಲ್ಲಿ ಮಳೆಯಾದರೆ ಫಸಲು ಹಾನಿಯಾಗುತ್ತದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ನರೇಗಲ್‌ದಲ್ಲೂ ಮಳೆ: ಪಟ್ಟಣದಲ್ಲಿ ಬುಧವಾರ ಬೆಳಿಗ್ಗೆ 6 ಗಂಟೆಯಿಂದ ಮೋಡಕವಿದ ವಾತವರಣ ಇದ್ದು ಮಧ್ಯಾಹ್ನ 3 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ನರೇಗಲ್ ಸುತ್ತಮುತ್ತ ತುಂತುರು ಮಳೆ ಆಗಿದೆ. ಈ ಮಳೆಯಿಂದ ಕಟಾವಿಗೆ ಬಂದಿರುವ ಹಿಂಗಾರು ಬೆಳೆಗಳಾದ ಕಡಲೆ, ಜೋಳ, ಗೋಧಿ, ಕುಸುಬೆ ಕಪ್ಪಾಗುವ ಸಾಧ್ಯತೆ ಇದೆ. ಇದರಿಂದ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗುವುದಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.