
ಶಿರಹಟ್ಟಿ : ದ್ವೇಷ ಬಿಡು-ಪ್ರೀತಿ ಮಾಡು ಎಂಬ ದಿವ್ಯ ಸಂದೇಶವನ್ನು ಸಾರಿದ ಶಿರಹಟ್ಟಿಯ ಕರ್ತೃ ಫಕೀರೇಶ್ವರ ಜಾತ್ರಾ ಮಹೋತ್ಸವದ 2ನೇ ದಿನವಾದ ಮಂಗಳವಾರದಂದು ನಡೆದ ಕಡುಬಿನ ಕಾಳಗವು ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಗಜರಾಜನ ಸ್ವಾಗತದೊಂದಿಗೆ, ಕುದುರೆ ನಗಾರಿ, ನಂದಿಕೋಲು ಮೆರವಣಿಗೆ, ಡೊಳ್ಳು ಕುಣಿತ ಮುಂತಾದ ವಾಧ್ಯಗಳೊಂದಿಗೆ ಕಡುಬಿನ ಕಾಳಗ ಪ್ರಾರಂಭವಾಯಿತು. 13ನೇ ಪಟ್ಟಾಧ್ಯಕ್ಷರಾದ ಫಕೀರ ಸಿದ್ದರಾಮ ಸ್ವಾಮೀಜಿ ಅಶ್ವಾರೂಢರಾಗಿ ಬೆಲ್ಲದ ಚೂರುಗಳನ್ನು ಭಕ್ತರ ಕಡೆಗೆ ಎಸೆಯುತ್ತಿದ್ದರು. ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸಾಥ ನೀಡಿದರು. ದೊರಕಿದ ಬೆಲ್ಲದ ಚೂರನ್ನು ಭಕ್ತರು ಪ್ರಸಾದ ರೂಪದಲ್ಲಿ ಸ್ವೀಕರಿಸಿದರು.
ಮೆರವಣಿಗೆಯು ಮಠದ ಪರಂಪರೆಯಂತೆ ಅದ್ಧೂರಿಯಾಗಿ ಜರುಗಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಜೈಕಾರ ಹಾಕುತ್ತಿದ್ದರು. ಕೊನೆಗೆ ಮುಸ್ಲಿಂ ಪರಂಪರೆಯಂತೆ ಅತ್ತಾರ ಕುಟುಂಬದ ಮನೆತನದವರು ಸ್ವಾಮೀಜಿಗಳಿಗೆ ಗುಲಾಲು ಎರಚುತ್ತಿದ್ದಂತೆ ಕಡುಬಿನ ಕಾಳಗಕ್ಕೆ ತೆರೆ ಬಿದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.