ADVERTISEMENT

ಆಕಸ್ಮಿಕ ಬೆಂಕಿ: ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 8:34 IST
Last Updated 27 ಫೆಬ್ರುವರಿ 2026, 8:34 IST
ಲಕ್ಷ್ಮೇಶ್ವರದ ವಿಜಯಲಕ್ಷ್ಮೀ ಕಾಟನ್ ಇಂಡಸ್ಟ್ರೀಜ್ ಎದುರು ಗುರುವಾರ ಬೆಂಕಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ಗೋವೊನಜೋಳ ಹೊಟ್ಟು ಸುಟ್ಟು ಕರಕಲಾಗಿದೆ. 
ಲಕ್ಷ್ಮೇಶ್ವರದ ವಿಜಯಲಕ್ಷ್ಮೀ ಕಾಟನ್ ಇಂಡಸ್ಟ್ರೀಜ್ ಎದುರು ಗುರುವಾರ ಬೆಂಕಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ಗೋವೊನಜೋಳ ಹೊಟ್ಟು ಸುಟ್ಟು ಕರಕಲಾಗಿದೆ.    

ಲಕ್ಷ್ಮೇಶ್ವರ: ಪಟ್ಟಣದ ದೊಡ್ಡೂರು ರಸ್ತೆಗೆ ಹೊಂದಿಕೊಂಡಿರುವ ವಿಜಯಲಕ್ಷ್ಮೀ ಕಾಟನ್ ಇಂಡಸ್ಟ್ರೀಜ್ ಎದುರು ಗುರುವಾರ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಘಟನೆ ಸಂಭವಿಸಿದೆ.

ಕಾಟನ್ ಇಂಡಸ್ಟ್ರೀಜ್ ಎದುರಿನ ಬಯಲಿನಲ್ಲಿ ಒಕ್ಕಣಿಗಾಗಿ ನೂರಾರು ಎಕರೆಯಲ್ಲಿ ಬೆಳೆದಿದ್ದ ಗೋವಿನಜೋಳ ರಾಶಿ ಹಾಕಲಾಗಿತ್ತು. ಒಕ್ಕಣಿ ನಂತರ ರೈತರು ಉಳಿದ ಮೇವು ಹಾಗೂ ಗೋವಿನಜೋಳದ ಹೊಟ್ಟನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಆಕಸ್ಮಿಕವಾಗಿ ಮೇವು ಹಾಗೂ ಬೆಂಡಿಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಎಲ್ಲವೂ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. 

ಭೇಟಿ: ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‍ಐ ನಾಗರಾಜ ಗಡದ, ಗ್ರಾಮ ಲೆಕ್ಕಾಧಿಕಾರಿ ಪಠಾಣ ಅವರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.