ADVERTISEMENT

ಆದರಹಳ್ಳಿ: ಹಂದಿಗಳ ಹಾವಳಿ ತಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 2:44 IST
Last Updated 24 ಡಿಸೆಂಬರ್ 2025, 2:44 IST
ಲಕ್ಷ್ಮೇಶ್ವರ ತಾಲ್ಲೂಕಿನ ಆದರಳ್ಳಿ ಗ್ರಾಮದಲ್ಲಿ ಬಿಡಾಡಿ ದನ ಹಾಗೂ ಹಂದಿಗಳ ಹಾವಳಿ ತಡೆಗೆ ಆಗ್ರಹಿಸಿ ಮಂಗಳವಾರ ಗ್ರಾಮಸ್ಥರು ತಹಶೀಲ್ದಾರ್‌ ಎಂ.ಧನಂಜಯ ಅವರಿಗೆ ಮನವಿ ಸಲ್ಲಿಸಿದರು
ಲಕ್ಷ್ಮೇಶ್ವರ ತಾಲ್ಲೂಕಿನ ಆದರಳ್ಳಿ ಗ್ರಾಮದಲ್ಲಿ ಬಿಡಾಡಿ ದನ ಹಾಗೂ ಹಂದಿಗಳ ಹಾವಳಿ ತಡೆಗೆ ಆಗ್ರಹಿಸಿ ಮಂಗಳವಾರ ಗ್ರಾಮಸ್ಥರು ತಹಶೀಲ್ದಾರ್‌ ಎಂ.ಧನಂಜಯ ಅವರಿಗೆ ಮನವಿ ಸಲ್ಲಿಸಿದರು   

ಲಕ್ಷ್ಮೇಶ್ವರ: ತಾಲ್ಲೂಕಿನ ಆದರಳ್ಳಿ ಗ್ರಾಮದಲ್ಲಿ ಬಿಡಾಡಿ ದನ ಹಾಗೂ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಸೂಕ್ತ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಂಗಳವಾರ ಗ್ರಾಮಸ್ಥರು ತಹಶೀಲ್ದಾರ್‌ ಎಂ.ಧನಂಜಯ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದ ಜಮೀನುಗಳಿಗೆ ನುಗ್ಗಿಗುತ್ತಿರುವ ಬಿಡಾಡಿ ದಣಗಳು ಬೆಳೆಗಳಿಗೆ ಹಾನಿ ಮಾಡುತ್ತಿವೆ. ರಸ್ತೆಯಲ್ಲಿ  ಬಿಡುಬಿಡುವುದರಿಂದ ರಸ್ತೆ ಅಪಘಾತ ಸಂಭವಿಸುತ್ತಿವೆ. ಅದೇರೀತಿ ಹಂದಿಗಳು ರೈತರ ತಿಪ್ಪೆಗಳಲ್ಲಿ ವಾಸಿಸುತ್ತಿವೆ. ದನ ಹಾಗೂ ಹಂದಿ ಮಾಲೀಕರಿಗೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಿಪ್ಪಣ್ಣ ಲಮಾಣಿ, ಶಂಕರಗೌಡ ಪಾಟೀಲ, ಹನುಮಂತಗೌಡ ಪಾಟೀಲ, ಮಂಜಪ್ಪ ಹೆಸರೂರ, ನೀಲಪ್ಪ ತಳವಾರ, ಮಹಾಂತ ಗೌಡ ಪಾಟೀಲ, ಮಮ್ಮಿಸಾಬ ವಾಲಿಕಾರ, ಚನ್ನಪ್ಪ ಲಮಾಣಿ, ಮಂಜುನಾಥ ರಾಹುತ್, ಗುಡದಪ್ಪ ಅಂಬಿಗೇರ, ಮಲ್ಲಿಕಸಾಬ್ ವಾಲಿಕಾರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.