ADVERTISEMENT

ಮುಳಗುಂದ: ಅಂಬಾಭವಾನಿ ಮೂರ್ತಿ ಪ್ರತಿಷ್ಠಾಪನೆ 14ರಂದು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 16:01 IST
Last Updated 11 ಆಗಸ್ಟ್ 2024, 16:01 IST

ಮುಳಗುಂದ: ಪಟ್ಟಣದ ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಟ್ರಸ್ಟ್ ಕಮಿಟಿಯ ಅಂಬಾಭವಾನಿ ದೇವಸ್ಥಾನದಲ್ಲಿ, ಆ.14 ರಂದು ಅಂಬಾಭವಾನಿ ದೇವಿಯ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನವಾಗಿ ನಿರ್ಮಾಣಗೊಂಡ ಕಾರ್ಯಾಲಯ ಕಟ್ಟಡ ಉದ್ಘಾಟನೆ ನಡೆಯಲಿದೆ.

ಆ.12 ರಂದು ಊರಿನ ಪ್ರಮುಖ ಬೀದಿಗಳಲ್ಲಿ ದೇವಿ ಮೂರ್ತಿ ಮೆರವಣೆಗೆ ನಡೆಯಲಿದೆ. 13ರಂದು ಬೆಳಿಗ್ಗೆ 6ಕ್ಕೆ ದೇವಸ್ಥಾನದಲ್ಲಿ ಹೋಮ, ಹವನ ಸೇರಿದಂತೆ ಅನೇಕ ದೇವತಾ ಕಾರ್ಯಗಳು ನಡೆಯಲಿವೆ. 14ರಂದು ಬೆಳಿಗ್ಗೆ 6ಕ್ಕೆ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ, ಸಿಂಹ ಪ್ರತಿಷ್ಠಾಪನೆ, ಪಾದ ಪ್ರತಿಷ್ಠಾಪನೆ ಜರುಗಲಿದೆ.

ನಂತರ ನೂತನವಾಗಿ ನಿರ್ಮಾಣಗೊಂಡ ಕಾರ್ಯಾಲಯ ಕಟ್ಟಡವನ್ನು ಕಾನೂನು ಸಚಿವ ಎಚ್.ಕೆ.ಪಾಟೀಲ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಧಾರವಾಡ ಮುರುಘಾಮಠದ ಮಲ್ಲಿಕಾರ್ಜನ ಸ್ವಾಮೀಜಿ, ಅಲಮೇಲ ವಿರಕ್ತಮಠದ ಜಗದೇವ ಮಲ್ಲಿಭೂಮಯ್ಯ ಸ್ವಾಮೀಜಿ, ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು, ಗದಗ ಅಡವೀಂದ್ರಮಠದ ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ಲಕ್ಷ್ಮಣಸಾ ಕಬಾಡಿ ಅಧ್ಯಕ್ಷತೆ ವಹಿಸುವದು. ಮುಖ್ಯ ಅತಿಥಿಗಳಾಗಿ ಸಂಸದ ಬಸವರಾಜ ಬೂಮ್ಮಾಯಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಎಸ್.ಎಂ.ನೀಲಗುಂದ, ಎಂ.ಡಿ.ಬಟ್ಟೂರ ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ಕಮಿಟಿ ಅಧ್ಯಕ್ಷ ಲಕ್ಷ್ಮಣ ಕಬಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.