ಮುಳಗುಂದ: ‘ರೈತರ ತ್ಯಾಗ ಬಲಿದಾನ ವ್ಯರ್ಥವಾಗದೇ ಸ್ಪೂರ್ತಿದಾಯಕವಾಗಿ ರೈತರು ಮತ್ತೆ ಸಂಘಟಿತರಾಗಿ ರಾಜ್ಯದಲ್ಲಿ ರೈತ ಸರ್ಕಾರ ತರುವ ಕೆಲಸ ಮಾಡಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಭಾನುವಾರ ನಡೆದ 35ನೇ ವರ್ಷದ ರೈತ ಹುತ್ಮಾತ ದಿನಾಚರಣೆಯಲ್ಲಿ ಮಾತನಾಡಿದರು.
‘ಕೇಂದ್ರ ಸರ್ಕಾರ ಅಗತ್ಯ ಯೂರಿಯಾ ಗೊಬ್ಬರ ಕೊಟ್ಟಿದೆ. ಆದರೆ ರಾಜ್ಯದಲ್ಲಿ ಯೂರಿಯಾ ಗೊಬ್ವರದ ಭ್ರಷ್ಟಾಚಾರ ನಡೆದಿದ್ದು, ಅಕ್ರಮ ಮಾರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹಲವಾರು ಕೃಷಿ ಪರ ಯೋಜನೆಗಳು ನಿಂತು ಹೋಗಿವೆ’ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ್, ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ, ಶಾಸಕ ಡಾ. ಚಂದ್ರು ಲಮಾಣಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್, ಮುಖಂಡರಾದ ರವಿ ದಂಡಿನ, ಭದ್ರೇಶ ಕುಸ್ಲಾಪೂರ, ರೈತ ಸಂಘದ ಅಧ್ಯಕ್ಷ ರಾಮಣ್ಣ ಕಮ್ಮಾರ ಇದ್ದರು.
ಈ ವೇಳೆ ಬಗರ್ ಹುಕುಂ ಚಳುವಳಿಯಲ್ಲಿ ಹುತಾತ್ಮರಾದ ಮಹಾಲಿಂಗಪ್ಪ ಮಲ್ಲೇಶಪ್ಪ ಗಿಡ್ಡಕೆಂಚಣ್ಣವರ, ಚನ್ನಬಸಪ್ಪ ನಿರ್ವಾಹಣಶೆಟ್ರ, ದೇವಲಪ್ಪ ಲಮಾಣಿ ಅವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ರೈತರ ಬಲಿ ವಿಷಾಧಕರ: ಸಂಸದ ಬೊಮ್ಮಾಯಿ
ರಾಜ್ಯದಲ್ಲಿ ರೈತ ಹೋರಾಟಕ್ಕೆ ಭವ್ಯ ಇತಿಹಾಸವಿದ್ದು ಬಗರ್ ಹುಕುಂ ಚಳವಳಿ ತನ್ನದೇ ಆದ ಮಹತ್ವ ಪಡೆದಿದೆ. ಕಂದಾಯ ಇಲಾಖೆಯಲ್ಲಿ ಭೂ ಸುದಾರಣೆ ಕಾನೂನು ಬಂದು ಹಕ್ಕು ಪತ್ರ ನೀಡುವ ಪ್ರಕ್ರಿಯೆಯಿಂದ ರೈತರಿಗೆ ಅನ್ಯಾಯವಾದಾಗ ಸರ್ಕಾರ ನ್ಯಾಯ ಕೊಡಲಿಲ್ಲ. ಉಳುವವನೆ ಒಡೆಯ ಕೇವಲ ಘೋಷಣೆಯಾಯಿತು. ಸೊರಟೂರು ಗ್ರಾಮದಲ್ಲಿ ಮೂವರು ಯುವ ರೈತರನ್ನು ಬಲಿ ತೆಗೆದುಕೊಂಡಿದ್ದು ವಿಷಾಧಕರ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.