ಎಮ್ಮೆ
ನರೇಗಲ್: ಪಟ್ಟಣದ ರೈತ ಅಂದಪ್ಪ ಶಂಕ್ರಪ್ಪ ಹಡಪದ ಎಂಬುವರ ಎರಡು ಎಮ್ಮೆಗಳು ಮೊಳಕೆಯೊಡೆದ ಹೆಸರು ಹಾಗೂ ಕುಳೆ ತಿಂದು ಸಾವನ್ನಪಿರುವ ಘಟನೆ ಬುಧವಾರ ಸಂಭವಿಸಿದೆ.
‘ರೈತರು ರಾಶಿ ಮಾಡಿದ ನಂತರ ಉಳಿದ ಹೆಸರು ಕಾಳುಗಳನ್ನು ಎಲ್ಲೆಂದರಲ್ಲಿ ಬಿಟ್ಟಿದ್ದು, ಮಳೆಯಿಂದಾಗಿ ಮೊಳಕೆಯೊಡೆದ ಹೆಸರು ಬೆಳೆ ತಿಂದು ಎಮ್ಮೆಗಳು ಮೃತಪಟ್ಟಿವೆ. ಇದರಿಂದ ಅಪಾರ ನಷ್ಟ ಸಂಭವಿಸಿದೆ’ ಎಂದು ಅಂದಪ್ಪ ಹಡಪದ ಅವಲತ್ತುಕೊಂಡರು.
ದ್ವಿದಳ ಧಾನ್ಯದ ಬೆಳೆಗಳನ್ನು ರಾಶಿ ಮಾಡಿ ಹೊಲದಲ್ಲಿಯೇ ಬಿಟ್ಟರೆ ಚಿಗುರುವ ಕುಳೆಯಲ್ಲಿ ವಿಷಕಾರಿ ಅನಿಲ ಪ್ರಮಾಣ ಹೆಚ್ಚಾಗಿ ಇರುತ್ತದೆ. ಇದನ್ನು ತಿಂದಾಗ ಶ್ವಾಸಕೋಶಕ್ಕೆ ತೊಂದರೆಯಾಗಿ ದನ ಕರುಗಳು ಮೃತಪಡುತ್ತವೆ. ಆದ್ದರಿಂದ ರೈತರು ಹಾಗೂ ಕುರುಗಾಹಿಗಳು ಜಾಗೃರಾಗಿರಬೇಕು. ಈ ಬಾರಿ ನರೇಗಲ್ ಭಾಗದಲ್ಲಿ 40ಕ್ಕೂ ಹೆಚ್ಚು ಕುರಿಗಳು, 2 ದನಗಳು ಸಾನ್ನಪ್ಪಿರುವ ಘಟನೆಗಳು ನಡೆದಿವೆ’ ಎಂದು ಪಶು ವೈದ್ಯಾಧಿಕಾರಿ ಲಿಂಗಯ್ಯ ಗೌರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.