ADVERTISEMENT

ಚೆಸ್ ಸ್ಪರ್ಧೆ: ವೈಭವ್‌ ರಾಷ್ಟ್ರಮಟ್ಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 4:26 IST
Last Updated 6 ನವೆಂಬರ್ 2025, 4:26 IST
ವೈಭವ್‌
ವೈಭವ್‌   

ರೋಣ: ಪಟ್ಟಣದ ನ್ಯೂ ಲಿಟಲ್ ಫ್ಲವರ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ವೈಭವ್‌ ಬಸವರಾಜ್ ಸಂಗನಬಶೆಟ್ಟರ್ ಚೆಸ್ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಎಸ್‌ಜಿಎಫ್‌ಐ ಸ್ಕೂಲ್, ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನ.3ರಿಂದ 5ರವರೆಗೆ ಯಾದಗಿರಿಯಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ವೈಭವ್‌ ಈ ಸಾಧನೆ ಮಾಡಿದ್ದಾನೆ.

ಸ್ಪರ್ಧೆಯಲ್ಲಿ ವಿಜೇತನಾದ ವಿದ್ಯಾರ್ಥಿಗೆ ಗದಗ ಜಿಲ್ಲಾ ಚೆಸ್ ಸಂಸ್ಥೆಯ ಅಧ್ಯಕ್ಷ ಗಿರೀಶ್ ಎಂ. ಅಗಡಿ ಮತ್ತು ಸದಸ್ಯರು ಹಾಗೂ ಗದಗ ಡಿಡಿಪಿಐ ಆರ್.ಎಸ್.ಬುರುಡಿ, ದೈಹಿಕ ಶಿಕ್ಷಣ ಶಿಕ್ಷಕ ನಿಡಗುಂದಿ ಅಭಿನಂದಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.