ADVERTISEMENT

ಮುಂಡರಗಿ: ಚುರುಕುಗೊಂಡ ಚುನಾವಣಾ ಕಣ

ಬುಧವಾರದವರೆಗೆ ಒಟ್ಟು 18 ನಾಮಪತ್ರ ಸಲ್ಲಿಕೆ

ಕಾಶಿನಾಥ ಬಿಳಿಮಗ್ಗದ
Published 15 ಮೇ 2019, 20:15 IST
Last Updated 15 ಮೇ 2019, 20:15 IST
ಮುಂಡರಗಿ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆಗಮಿಸಿದ ಅಭ್ಯರ್ಥಿಗಳ ಮಹಿಳಾ ಕಾರ್ಯಕರ್ತೆಯರು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಿಶ್ರಾಂತಿ ಪಡೆದರು
ಮುಂಡರಗಿ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆಗಮಿಸಿದ ಅಭ್ಯರ್ಥಿಗಳ ಮಹಿಳಾ ಕಾರ್ಯಕರ್ತೆಯರು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಿಶ್ರಾಂತಿ ಪಡೆದರು   

ಮುಂಡರಗಿ: ಮೇ 29ರಂದು ನಡೆಯಲಿರುವ ಪುರಸಭೆ ಚುನಾವಣೆಗೆ ಪಕ್ಷೇತರ ಹಾಗೂ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸೇರಿ ಬುಧವಾರ ಒಟ್ಟು 18 ನಾಮಪತ್ರಗಳು ಸಲ್ಲಿಕೆಯಾದವು. ಸಂಜೆಯವರೆಗೂ ಪುರಸಭೆ ಆವರಣ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರಿಂದ ತುಂಬಿ ತುಳುಕುತ್ತಿತ್ತು.

ಮೇ 9ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿತ್ತು. ಆದರೆ, ಅಭ್ಯರ್ಥಿಗಳ ಆಯ್ಕೆ ವಿಳಂಬವಾದ್ದರಿಂದ ನಾಮಪತ್ರ ಸಲ್ಲಿಕೆಯೂ ವಿಳಂಬವಾಯಿತು. ಪ್ರತಿಯೊಂದು ವಾರ್ಡಿನಲ್ಲಿ ಎಲ್ಲ ಪಕ್ಷಗಳಿಂದ ಆಕಾಂಕ್ಷಿಗಳು ಹೆಚ್ಚಿದ್ದರಿಂದ ಹಆಯ್ಕೆ ಕಗ್ಗಂಟಾಗಿತ್ತು. ನಾಲ್ಕು ದಿನಗಳಿಂದ ಬಿಜೆಪಿ, ಕಾಂಗ್ರೆಸ್, ಜೆ.ಡಿ.ಎಸ್ ಹಾಗೂ ಬಿ.ಎಸ್.ಪಿ ಜಿಲ್ಲಾ ಮುಖಂಡರು ಸರಣಿ ಸಭೆಗಳನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರು.

ಇದರಿಂದ ಮಂಗಳವಾರದವರೆಗೆ ನಿರಸವಾಗಿದ್ದ ಚುನಾವಣೆ ಚಟುವಟಿಕೆಗಳು ಬುಧವಾರ ವೇಗ ಪಡೆದುಕೊಂಡವು. ಬುಧವಾರ ವಾರ್ಡ ನಂಬರ್ 1, 3, 4, 8, 11, 13, 16, 19, 22ರಲ್ಲಿ ತಲಾ ಒಬ್ಬರು ಅಭ್ಯರ್ಥಿ ನಾಮಪತ್ರ ಸಲ್ಲಿಸಿದರು. ವಾರ್ಡ ನಂಬರ್ 5 ಹಾಗೂ 18ರಲ್ಲಿ ತಲಾ ಇಬ್ಬರು, ವಾರ್ಡ ನಂಬರ್ 14ರಲ್ಲಿ ಮೂವರು ನಾಮಪತ್ರ ಸಲ್ಲಿಸಿದರು.

ADVERTISEMENT

ಪಟ್ಟಣದಲ್ಲಿರುವ ಒಟ್ಟು 23 ವಾರ್ಡುಗಳಿಗೆ ಬಿಜೆಪಿಯಿಂದ ಸ್ಪರ್ಧಿಸಲು ಒಟ್ಟು 86 ಸ್ಪರ್ಧಾಳುಗಳು ಹಾಗೂ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದುಕೊಳ್ಳಲು 65ಕ್ಕೂ ಹೆಚ್ಚು ಸ್ಪರ್ಧಾಳುಗಳು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದರು. ಬಂಡಾಯದ ಸಾಧ್ಯತೆ ಇರುವುದರಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿಗಳಿಗೆ ಇನ್ನೂ ಬಿ ಫಾರ್ಮ ನೀಡಿಲ್ಲ. ಗುರುವಾರ ಎಲ್ಲರಿಗೂ ಬಿ ಪಾರ್ಮ ನೀಡುವುದಾಗಿ ಮುಖಂಡರು ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.