ಗದಗ: ‘ಪಕ್ಷದಲ್ಲಿ ಶಿಸ್ತು ತರಲು ಶಾಸಕರ ಜತೆಗೆ ಸುರ್ಜೇವಾಲಾ ಸಭೆ ಮಾಡಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ನಿಮಗೆ ಇದ್ದರೆ ಹೇಳಿ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
‘ಲಾಡ್ ಬಂಡವಾಳ ಬಯಲು ಮಾಡುತ್ತೇನೆ’ ಎಂದಿರುವ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಮೊದಲಿನಿಂದಲೂ ನಾನು ಯಾರಿಗೂ ಬೈದಿಲ್ಲ. ನನ್ನ ವ್ಯಕ್ತಿತ್ವ ಬಹಿರಂಗ ಮಾಡುತ್ತಾರೆಂದರೆ ಒಳ್ಳೆಯದಲ್ಲವೇ? ಅವರಿಗೆ ಒಳ್ಳೆಯದಾಗಲಿ’ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
‘ಖರ್ಗೆ ಅವರನ್ನು ಪಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಿ’ ಎಂದಿರುವ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಬಿಜೆಪಿಯವರು ನಾರಾಯಣಸ್ವಾಮಿ ಅವರನ್ನು ಮುಂದಿನ ಸಿಎಂ ಆಗಿ ಘೋಷಣೆ ಮಾಡುವರೇ? ಜನರ ಗಮನ ಸೆಳೆಯಲು ಸುಮ್ಮನೆ ಅವರೇ ಏನಾದರೂ ಹುಟ್ಟಿಸಿಕೊಂಡು ಮಾತನಾಡುತ್ತಾರೆ. ನಮಗೆ ಹೈಕಮಾಂಡ್ ಇದೆ. ಇನ್ನೂ ಮೂರು ವರ್ಷದ ಬಳಿಕ ಚುನಾವಣೆ ಬಂದಾಗ ತೀರ್ಮಾನ ಮಾಡುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.