ADVERTISEMENT

ದಸರಾ ಹಬ್ಬ: ನಿತ್ಯವೂ ಅನ್ನಸಂತರ್ಪಣೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 14:49 IST
Last Updated 8 ಅಕ್ಟೋಬರ್ 2024, 14:49 IST
ಲಕ್ಷ್ಮೇಶ್ವರ ಬಸ್ತಿಬಣದ ಮೇಲಿನ ಕಾಮನಕಟ್ಟೆ ಹತ್ತಿರದ ಮಾಗಡಿ ಬಸವೇಶ್ವರ ದೇವಸ್ಥಾನದ ಸಮಿತಿ ವತಿಯಿಂದ  ಅನ್ನಸಂತರ್ಪಣೆ ನಡೆಯಿತು
ಲಕ್ಷ್ಮೇಶ್ವರ ಬಸ್ತಿಬಣದ ಮೇಲಿನ ಕಾಮನಕಟ್ಟೆ ಹತ್ತಿರದ ಮಾಗಡಿ ಬಸವೇಶ್ವರ ದೇವಸ್ಥಾನದ ಸಮಿತಿ ವತಿಯಿಂದ  ಅನ್ನಸಂತರ್ಪಣೆ ನಡೆಯಿತು   

ಲಕ್ಷ್ಮೇಶ್ವರ: ಸಧ್ಯ ತಾಲ್ಲೂಕಿನಲ್ಲೆಡೆ ದಸರಾ ಹಬ್ಬ ಕಳೆಗಟ್ಟಿದೆ. ದೇವಿಯ ಎಲ್ಲ ದೇವಸ್ಥಾನಗಳಲ್ಲಿ ಪುರಾಣಗಳು ಸಾಗಿವೆ. ಅದರಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರತಿದಿನ ನಡೆಯುತ್ತಿದ್ದು ನಸುಕಿನ ಜಾವದಲ್ಲಿ ಮಹಿಳೆಯರು ಬನ್ನಿ ಮರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.

ಅದರಂತೆ ಇಲ್ಲಿನ ಬಸ್ತಿಬಣದ ಮಾಗಡಿ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ಪೇಠಬಣದ ಶಿವರುದ್ರಮ್ಮ ದೇವಿ ದೇವಸ್ಥಾನದ ಸಮಿತಿ ವತಿಯಿಂದ ದಸರಾ ಮುಗಿಯುವವರೆಗೆ ಅಂದರೆ ಒಂಭತ್ತು ದಿನಗಳವರೆಗೆ ಅನ್ನಸಂತರ್ಪಣೆ ನಡೆಯುತ್ತಿದೆ. ಕಳೆದ ಏಳು ವರ್ಷಗಳಿಂದ ಈ ಅನ್ನಸಂತರ್ಪಣೆ ನಡೆಯುತ್ತಿದ್ದು ದಿನಾಲೂ ರಾತ್ರಿ ನೂರಾರು ಜನರು ಅನ್ನ ಪ್ರಸಾದ ಸೇವಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT